ಪಾದಯಾತ್ರೆ ಮೂಲಕ ಮತಯಾಚನೆ

ಸಂಜೆವಾಣಿ ವಾರ್ತೆ
ನಂಜನಗೂಡು: ಏ.22:- ಶಾಸಕ ದರ್ಶನ್ ದ್ರುವ ನಾರಾಯಣ್ ನಗರಸಭೆ ಸೇರಿದ ವಾರ್ಡುಗಳಲ್ಲಿ ಲೋಕಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಒಂದನೇ ವಾರ್ಡ್ ಹಳ್ಳದಕೇರಿಯಿಂದ ಪಾದಯಾತ್ರೆ ಮುಖಾಂತರ ವಾರ್ಡ್1 ಸೇರಿದಂತೆ.2, 3, 4.9.10. 11.12 13.14.15ರವರೆಗೆ ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಪ್ರತಿ ಮನೆ ಮನೆಗೂ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಅವರ ಪರ ಮತಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿ ಪ್ರತಿ ಮನೆಗಳಿಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ದೊರಕುತ್ತಿದೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ತಿಂಗಳಿಗೆ 2000 ಉಚಿತ ಕರೆಂಟ್ ಉಚಿತ ಬಸ್ ಸಂಚಾರ ಸೇರಿದಂತೆ ಇನ್ನೂ ಅನೇಕ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷ ನೀಡಿದೆ ಇದರಿಂದ ಪ್ರತಿಯೊಬ್ಬ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ
ಕೊಟ್ಟ ಮಾತಿನಂತೆ ಕಾಂಗ್ರೆಸ್ ಪಕ್ಷ ನಿಮಗೆ ನೀಡಿದೆ ಅದರಂತೆ ನೀವು ಕೂಡ ನನಗೆ ಬೆಂಬಲ ಸೂಚಿ ಅತಿ ಹೆಚ್ಚು ಮತ ನೀಡಿ ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದೀರಿ ಅದರಂತೆ ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ಸುನಿಲ್ ಬೋಸ್ ರವರಿಗೆ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ , ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್ ನಗರಸಭೆ ಸದಸ್ಯರಾದ ಗಂಗಾಧರ ಮಹೇಶ್ ಪ್ರದೀಪ್ ಗಾಯಿತ್ರಿ ಸಿದ್ದಿಕ್ ಮಾಜಿ ನಗರಸಭೆ ಅಧ್ಯಕ್ಷರಾದ ಶ್ರೀಧರ್ ಶ್ರೀನಿವಾಸ್ ದೊರೆಸ್ವಾಮಿ ಮಂಜುನಾಥ್ ಉಮೇಶ್ ಹೋಟೆಲ್ ರಾಜಪ್ಪ ಮುಖಂಡರಾದ ಇಂದನ್ ಬಾಬು ಬುಲೆಟ್ ಮಾದೇವಪ್ಪ ಅಜ್ಗರ್ ಶ್ರೀಕಂಠ ಜಗದೀಶ್ ಸೇರಿದಂತೆ, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು