
ಸೈದಾಪುರ:ಜ.18:ಇಲ್ಲಿಗೆ ಸಮೀಪದ ಸುಕ್ಷೇತ್ರ ಕಾಳೆಬೆಳಗುಂದಿ ದೇವಸ್ಥಾನ ಮಾರ್ಗದ ಮೂಲಕ ವಡಗೇರಾ ತಾಲೂಕಿನ ಗುರುಸಣಿಗಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಯುವಕ ಮಂಡಳಿಯವರು ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದರು.
ಈ ಸಂದರ್ಭದಲ್ಲಿ ಶ್ರೀ ಬನದೇಶ್ವರರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ 11 ವರ್ಷಗಳಿಂದ ನಾವು ಪವಿತ್ರ ಪುಣ್ಯ ಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ. ಇದರಿಂದ ಒತ್ತಡದ ಬದುಕಿನ ಭಾರವಾದ ಮನಸ್ಸಿಗೆ ಚೈತನ್ಯವನ್ನುಂಟು ಮಾಡುತ್ತದೆ. ಸಾಗುವ ಮಾರ್ಗದಲ್ಲಿ ಭಜನೆ ಸೇರಿದಂತೆ ದೇವರ ನಾಮ ಸ್ಮರಣೆ. ಸಮಯ ಪಾಲನೆ ಜೀವನಕ್ಕೆ ಹೊಸ ಬದಕನ್ನು ರೂಪಿಸಿಕೊಳ್ಳವಲ್ಲಿ ಇದೊಂದು ಅವಕಾಶವಾಗಿದೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವರ್ಷ ಹೊಸ ವರ್ಷದ ಆರಂಭದಲ್ಲಿ ಹೋಗುತ್ತಿದ್ದೇವೆ. ನೂತನ ವರ್ಷ ದೇಶದಲ್ಲಿ ಆರೋಗ್ಯವಂತ ಪರಿಸರ ನಿರ್ಮಾಣವಾಗಲಿ, ರೈತರ ಬದುಕು ಸಂತಸವಾಗಲಿ ಎಂಬುವುದು ಪಾದಯಾತ್ರೆಗಳ ಅಭಿಪ್ರಾಯವಾಗಿದೆ.