ಪಾದಯಾತ್ರೆಗೆ ಚಾಲನೆ

ಕಾಳಗಿ : ಜು.23:ಉತ್ತಮ ಮಳೆ-ಬೆಳೆಯಾಗಿ ರೈತರು ಪಡುತ್ತಿರುವ ಕಷ್ಟಕ್ಕೆ ಫಲವನ್ನು ಲಭಿಸಲಿ ಎಂದು ಲೋಕಕಲ್ಯಾಣಾರ್ಥಕ್ಕಾಗಿ ಇಲ್ಲಿಯ ಸದ್ಭಕ್ತ ಮಂಡಳಿಯವರು, ಕಾಳಗಿಯಿಂದ ಬೀದರ ಮಲ್ಲಯ್ಯನ ಮಂದಿರದ ವರೆಗೂ ಶಿವ ಭಜನೆಯೊಂದಿಗೆ ಪಾದಯಾತ್ರೆಗೆ ಶುಕ್ರವಾರ ಚಾಲನೆ ನೀಡಿದರು.
ಸದ್ಭಕ್ತರಾದ ದೇವಿಂದ್ರಪ್ಪ ಮುಗಳಿ, ಶಿವಶರಣಪ್ಪ ಬಿರಾದಾರ, ಕಾಳಗಿ ಪಪಂ. ನಾಮನಿರ್ದೇಶನ ಸದಸ್ಯ ಕಾಳಶೇಟ್ಟಿ ಪಡಶೇಟ್ಟಿ, ಮಲ್ಲಿಕಾರ್ಜುನ ತೇಂಗಳಿ, ಸೂರ್ಯಕಾಂತ ಡೊಣ್ಣೂರ, ಅಭಿಷೇಕ ಚಂದನಕೇರಿ, ನಾಗೇಶ್ ಚಿಮ್ಮನಚೋಡ, ಮಲ್ಲಿಕಾರ್ಜುನ ಪೂಜಾರಿ, ಯಲ್ಲಪ್ಪ ಒಡೆಯರಾಜ ಹಾಗೂ ರಾಜು ಹರಕಂಚಿ ಇದ್ದರು.