ಪಾದಯಾತ್ರಿಯಲ್ಲಿ ಸೂರಗೊಂಡನಕೊಪ್ಪಕ್ಕೆ ತೆರಳುತ್ತಿರುವ ಮಾಲಾಧಾರಿಗಳು.

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಂಜೆವಾಣಿವಾರ್ತೆ

 ಹರಪನಹಳ್ಳಿ.ಫೆ.11; ಪ್ರತಿವರ್ಷದಂತೆ ಈ ವರ್ಷವು ಸಹ ಗೋರ್ ಬಂಜಾರ್ ಸಮಾಜದ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೆಲವು ಲೇಖನ ಮತ್ತು ಪ್ರವಾಸಿಗರ ಬರಹಗಳಲ್ಲಿ ಬಂಜಾರರ ಕುರಿತು ಉಲ್ಲೇಖಿಸಲಾಗಿದೆ. ಬಂಜಾರರ ಸಂಸ್ಕೃತಿಯು ಜೀವನದ ನಾನಾ ಆಯಾಮ ದೇಯ, ತತ್ವ-ಸಿದ್ದಾಂತಗಳ ಸಮನ್ವಯ ಸ್ವರೂಪವಾಗಿರುವುದು ಅವರ ಜನಪದ ಹಾಡು ಮತ್ತು ಮೌಖಿಕ ಸಾಹಿತ್ಯದಿಂದ ತಿಳಿಯಬಹುದಾಗಿದೆ.ತಾಲೂಕಿನ ಮಾಡಗೇರಿ ತಾಂಡದಲ್ಲಿ 22ನೇ ವರ್ಷದ ಮಾಲಾಧಾರಣೆ ವ್ರತ ಮತ್ತು ಪಾದಯಾತ್ರೆಯ ಶ್ರೀಸೇವಾಲಾಲ್ ಮಹಾರಾಜರ 285ನೇ ಜಯಂತೋತ್ಸವದ ಅಂಗವಾಗಿ ಸುಕ್ಷೇತ್ರ ಸೂರಗೊಂಡನಕೊಪ್ಪಕ್ಕೆ ಪಾದಯಾತ್ರೆ ತೆರಳುವ ಸಂದರ್ಭದಲ್ಲಿ ಮಾಲಾಧಾರಿಗಳು ಸೇವಲಾಲ್ ಜಯಂತಿಯ ಬಗ್ಗೆ ವಿವರಿಸಿದರು.ಭಾರತ ದೇಶದ ಕನ್ನಡ ನಾಡಿನ ಪುಣ್ಯ ಭೂಮಿಯಲ್ಲಿ ಶ್ರೀ ಭೀಮಾನಾಯ್ಕ ಧರ್ಮಿಣಿ ಮಾತೆಯ ಜೇಷ್ಠ ಪುತ್ರ ಬಂಜಾರ್ ಜನಾಂಗದ ಆರಾಧ್ಯ ದೇವ ಬ್ರಹ್ಮಚಾರಿಯಾಗಿ ಮಹಾಪವಾಡ ಪುರುಷರಾಗಿ ಬಂಜಾರ್ ಜನಾಂಗದ ಉದ್ದಾರಕ್ಕಾಗಿ ಕಾಡು ಬೆಟ್ಟ ಗುಡ್ಡಗಳಲ್ಲಿ ಜಾನುವಾರುಗಳನ್ನು ಕಟ್ಟಿಹಾಕಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಿದ ಧಾರ್ಮಿಕ ಗುರುಗಳ ಹೆಸರಿನಲ್ಲಿ ಧರಿಸಿರುವ ಮಾಲೆ ಬಹಾಳ ಪವಿತ್ರವಾದದ್ದು, ಎಲ್ಲರೂ ಭಕ್ತಿಯಿಂದ ಶ್ರದ್ಧೆಯಿಂದ ನಡೆದುಕೋಳ್ಳುತ್ತಾರೆ.ಸಂತ ಶ್ರೀಸೇವಾಲಾಲ್ ಜಗದ್ಗುರುಗಳ ದಯೆಯಿಂದ ಆಶಾಂತಿ, ಅಜ್ಞಾನ ಅಂಧಕಾರ ಅಹಂಕಾರವನ್ನು ಹೋಗಲಾಡಿಸಿ ಶಾಂತಿ ದಯೆ, ಕರುಣೆ, ಭಕ್ತಿಯಿಂದ ಮುಕ್ತಿ ಹೊಂದಿ ಜ್ಞಾನದ ಜ್ಯೋತಿ ಬೆಳಗಿಸಲು ಈ ಮಹಾ ಪುರುಷನ ಹೆಸರಿನಲ್ಲಿ ಮಾಲಾಧರಿಸಿರುವ ಮಾಲಾಧರಿಗಳಿಗೆ ಪ್ರತಿವರ್ಷ ಕೈಲಾಗದಷ್ಟು ಸಹಾಯವನ್ನು ಭಕ್ತಾಧಿಗಳು ನೀಡುತ್ತಾರೆ.ತಾಲೂಕಿನ ಬಾಪೂಜಿನಗರ, ಬೇವಿನಹಳ್ಳಿತಾಂಡ, ಸೇವನಗರ, ವ್ಯಾಸನತಾಂಡ, ಮಾಡ್ಲೀಗೇರಿತಾಂಡ, ಹಾರಕನಾಳು ಸಣ್ಣ ತಾಂಡ, ದೊಡ್ಡತಾಂಡ, ಚನ್ನಹಳ್ಳಿತಾಂಡ, ಬಂಡ್ರಿತಾAಡ, ಬೆಂಡಿಗೇರಿ ತಾಂಡ ಸೇರಿದಂತೆ ತಾಲೂಕಿನ ವಿವಿಧ ತಾಂಡಗಳಲ್ಲಿ ಸೇವಾಲಾಲ್ ಜಯಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.ಈ ಸಂದರ್ಭದಲ್ಲಿ ಮಾಡಲಗೇರಿ ತಾಂಡದ ಹಟ್ಟಿನಾಯ್ಕ ಎಂ.ಪಿ.ನಾಯ್ಕ, ಡಾವೋ ಗೇಮ್ಯಾನಾಯ್ಕ, ಕಾರಬಾರಿ ಯಂಕ್ಯನಾಯ್ಕ, ಗ್ರಾ.ಪಂ.ಸದಸ್ಯ ಎಂ. ಹಾಲೇಶ್‌ನಾಯ್ಕ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗೇಂದ್ರನಾಯ್ಕ, ಗ್ರಾ.ಮಾಜಿ ಸದಸ್ಯ ಆರ್.ಮಲ್ಲೇಶ್‌ನಾಯ್ಕ, ಎಂ.ಕೋಟ್ರೇಶ್‌ನಾಯ್ಕ, ವಿ. ಮಲ್ಲೇಶ್ ನಾಯ್ಕ, ಪೂಜಾರಿ ಶೇಖರ್‌ನಾಯ್ಕ, ಆರ್.ಚೆನ್ನವೀರನಾಯ್ಕ, ಚುಣ್ಯಾನಾಯ್ಕ, ಲಂಕೇಶ್ ನಾಯ್ಕ, ಎಂ.ಎಸ್.ನಾಯ್ಕ, ವಿ.ರಾಮನಾಯ್ಕ, ಡಿ.ರಮೇಶ್‌ನಾಯ್ಕ, ವಿ.ಗಣೇಶ್‌ನಾಯ್ಕ, ಎಲ್. ಭೀಮಾನಾಯ್ಕ, ಹೋಭ್ಯಾನಾಯ್ಕ, ಬಿ.ಯುವರಾಜ್‌ನಾಯ್ಕ, ಕೃಷ್ಣನಾಯ್ಕ, ಎಂ.ರಮೇಶ್‌ನಾಯ್ಕ, ಹೆಚ್. ಮಾಹೇಶ್‌ನಾಯ್ಕ, ವಿ.ಸಂತೋಷ್‌ನಾಯ್ಕ, ಜಿ.ಶಂಕರ್‌ನಾಯ್ಕ, ಪ್ರವೀಣ್ ಕುಮಾರ್, ಡಿ.ಮಲ್ಲೇಶ್‌ನಾಯ್ಕ, ಸೇರಿದಂತೆ ಇದ್ದರು.