ಪಾದಯಾತ್ರಿಗಳಿಗೆ ಪ್ರಸಾದ, ಹಣ್ಣು, ಹಂಪಲು, ತಂಪುಪಾನೀಯ ವಿತರಣೆ


ಸಂಜೆವಾಣಿ ವಾರ್ತೆ
ಸಂಡೂರು : ಮಾ: 5:  ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಭಾಗಿಯಾಗಲು ಸಂಡೂರು ತಾಲೂಕಿನಿಂದ ನೂರಾರು ಭಕ್ತರು ಪಾದಯಾತ್ರೆಯನ್ನು ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರೆ ಅವರಿಗೆ ಭಕ್ತಾದಿಗಳು ಹಣ್ಣು, ನೀರು, ತಂಪುಪಾನೀಯ, ಆಹಾರವನ್ನು ವಿತರಿಸುವ ಮೂಲಕ ಉಪಚರಿಸಿ ಪಾದಯಾತ್ರೆಗೆ ಸಂಡೂರಿನ ಹಲವಾರು ಭಕ್ತರು ಶುಭಕೋರಿದರು.
ತಾಲೂಕಿನ ಸಂಡೂರು ಸೀ ಎನ್ ಸೆಪ್ಟಂಬರ್ ಸ್ಥಳವಾದ ಸಂಡೂರು –ಕೊಟ್ಟೂರು ಮಾರ್ಗ ಮಧ್ಯದಲ್ಲಿ ಸಂಡೂರಿನ ಜೋಳಿಗೆ ಟ್ರಸ್ಟ್ ವತಿಯಿಂದ ಪಾದಯಾತ್ರೆಗಳಿಗೆ ಹಣ್ಣು, ಮಜ್ಜಿಗೆ, ಕುಡಿಯುವ ನೀರಿನ ಬಾಟಲಿಗಳನ್ನು, ತಂಪು ಪಾನೀಯಗಳನ್ನು ವಿತರಿಸಿ ಅವರ ಯಾತ್ರೆ ಯಶಸ್ವಿಯಾಗಲು ಶುಭಕೋರಿದರು. ಅಲ್ಲದೆ ಭಕ್ತರ ಪಾದಯಾತ್ರೆಯಲ್ಲಿ ಬಿರು ಬೇಸಿಗೆಯನ್ನು ಲೆಕ್ಕಿಸದೇ ಬರಿಗಾಲಿನಿಂದ ಪಾದಯಾತ್ರೆಯನ್ನು ಕೆಲವರು ನಡೆಸಿದರೆ ಮತ್ತೆ ಕೆಲ ಭಕ್ತರು ಕೊಟ್ಟೂರೇಶನ ಒಡಪಾದ ಕೊಟ್ಟೂರು ದೊರೆಯೇ, ನಿನಗಾರು ಸರಿಯೇ , ಸರಿ ಎಂದವರ ಹಲ್ಲು ಮುರಿಯೇ ಎಂದು ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ಜಯವಾಗಲಿ ಎಂದು ಜಯಘೋಷ ಕೂಗಿದರು, ಮತ್ತೆ ಕೆಲ ಭಕ್ತರು ಭಜನೆಯನ್ನು ಮಾಡುತ್ತಾ ಸಾಗಿದರು. ಅವರ ಈ ಉತ್ಸಾಹಕ್ಕೆ ದಾರಿಯಲ್ಲಿ ಅವರ ದಣಿವರಿಸಲು ನೀಡಿದ ತಂಪು ಪಾನೀಯ, ಹಣ್ಣು ಹಂಪಲಗಳು ಇನ್ನೂ ಹೆಚ್ಚಿನ ಉತ್ಸಾಹವನ್ನು ನೀಡಿತು.
ಈ ಸಂದರ್ಭದಲ್ಲಿ ಮುಖಂಡರಾದ ಆಶಾಲತಾ ಸೋಮಪ್ಪ, ವೀರಭದ್ರೇಶ್ವರ ಸ್ವಾಮಿಯ ಅರ್ಚಕರು, ಪ್ರಕಾಶ್, ಇತರ ಹಲವಾರು ದಾನಿಗಳು ಪಾದಯಾತ್ರಿಗಳಿಗೆ ವಿತರಿಸಿದರು.
ಯಶಸ್ವಿಕರಿಸಲು ಭಕ್ತರು ಸಾಕ್ಷಿಯಾದರು,  ಸೇವೆಯನ್ನು ಯಶಸ್ವಿಯಾಗಿ ನಡೆಸಲು ಕಾರಣೀಭೂತರಾದರು.