
ಸಿರವಾರ,ಮಾ.೧೪- ಯುಗಾದಿ ಹಬ್ಬದ ಅಂಗವಾಗಿ ಶ್ರೀಶೈಲಾದಲ್ಲಿ ಜರುಗುವ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ತೆರಳುತ್ತಿದ್ದೂ, ಎಲ್ಲಾರೂ ಸುರಕ್ಷಿತವಾಗಿ ದರ್ಶನ ಪಡೆದು ಬರಲಿ, ಶ್ರೀಶೈಲಾ ಮಲ್ಲಿಕಾರ್ಜುನ ಸಕಲರಿಗೂ ಒಳ್ಳೆಯದು ಮಾಡಲಿ ಎಂದು ಮಾಜಿ ಶಾಸಕ ಹಂಪಯ್ಯನಾಯಕ ಹಾರೈಸಿದರು.
ನೆರೆ ರಾಜ್ಯ ಆಂಧ್ರಪ್ರದೇಶದ ಶ್ರೀಶೈಲಾಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗಾಗಿ ಪಟ್ಟಣದ ವೈ.ಎ.ಜಿ. ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಅನ್ನ ದಾಸೋಹ ಹಾಗೂ ವಿಶ್ರಾಂತಿ ವ್ಯವಸ್ಥೆಯಲ್ಲಿ ಭಕ್ತರಿಗೆ ಪ್ರಸಾದವನ್ನು ಉಣಬಡಿಸಿ ಮಾತನಾಡಿ ಅವರು, ಎಲ್ಲಾ ಸ್ನೇಹಿತರು ಕೂಡಿ ಪಾದಯಾತ್ರಿಗಳಿಗೆ ಅನ್ನ ದಾಸೋಹ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇದೇ ರೀತಿ ಪ್ರತಿ ವರ್ಷ ಸೇವೆ ಮಾಡುವ ಶಕ್ತಿ ದೇವರು ಕರುಣಿಸಲಿ, ಭಕ್ತರು ಸಹ ಎಲ್ಲಾರಿಗೂ ಒಳ್ಳೆಯದು ಆಗಲೆಂದು ಪ್ರಾರ್ಥಿಸಿ ಎಂದರು.
ಈ ಸಂದರ್ಭದಲ್ಲಿ ಚುಕ್ಕಿ ಶಿವಕುಮಾರ, ಬ್ರೀಜೇಶ ಪಾಟೀಲ್, ಪ.ಪಂ ಸದಸ್ಯ ವೈ.ಭೂಪನಗೌಡ, ಶಿವಶರಣ ಸಾಹುಕಾರ ಅರಕೇರಿ, ನಾಗರಾಜಗೌಡ ಡಿಎನ್.ವೈ, ಶ್ರೀದರಸ್ವಾಮಿ, ಪ್ರಭು ಇಂಗಳಿಗಿ, ಎ.ನ್.ಚಂದ್ರಶೇಖರ, ರಂಗನಾಥನಾಯಕ, ಕೆ.ರಘು, ರಫಿ, ನಾಗರಾಜ ದೊರೆ ಸೇರಿದಂತೆ ಇನ್ನಿತರರು ಇದ್ದರು.