ಪಾದಚಾರಿ ಸಾವು

ಕಲಬುರಗಿ,ಅ.3-ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ-ಶಹಾಬಾದ ರಸ್ತೆಯ ನಂದೂರ ಇಂಡಸ್ಟ್ರಿಯಲ್ ಹತ್ತಿರ ನಡೆದಿದೆ.
ಮೃತನನ್ನು ಭಂಕೂರ ಶಾಂತನಗರದ ರವಿ ತಂದೆ ಬಸಣ್ಣ (38) ಎಂದು ಗುರುತಿಸಲಾಗಿದೆ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ರವಿ ಕೆಲಸ ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಅವರ ಸೋದರಳಿಯ ಅನೀಲ ಪೂಜಾರಿ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.