ಪಾದಚಾರಿ ರಸ್ತೆ ಮೇಲಿನ ಸರಕುಗಳ ಎತ್ತಂಗಡಿ

ಭಾಲ್ಕಿ:ಜೂ.28: ಪಟ್ಟಣದ ಮುಖ್ಯರಸ್ತೆಗಳಿಗೆ ಹೊಂದಿಕೊಂಡಿರುವ ಪಾದಚಾರಿ ರಸ್ತೆಗಳ ಮೇಲೆ ವರ್ತಕರು ಇಟ್ಟಿರುವ ಸಾಮಾನುಗಳನ್ನು ಪುರಸಭೆ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಸೋಮವಾರ ಪುರಸಭೆ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ,ಈ ಹಿಂದೆ ಉಭಯ ಪೋಲಿಸ್ ಮತ್ತು ಪುರಸಭೆ ಅಧಿಕಾರಿಗಳು ಸಾರ್ವಜನಿಕ ಸಭೆ ಕರೆದು ಬಟ್ಟೆ,ಕಿರಾಣಾ,ಹೋಟಲ್,ಸ್ಟೇಷನರಿ,ಬೇಕರಿ,ತರಕಾರಿ ಸೇರಿದಂತೆ ಇತರೆ ವ್ಯಾಪಾರಸ್ಥರಿಗೆ ತಮ್ಮ ಅಂಗಡಿಗಳ ಮುಂದೆ ಇಟ್ಟಿರುವ ಸಾಮಾನುಗಳು ತೆರವುಗೊಳಿಸಬೇಕು ಎಂದು ಗಡವು ನೀಡಲಾಗಿತ್ತು.ಆದಾಗ್ಯೂ ಕೆಲವು ವರ್ತಕರು ಪಾದಚಾರಿ ರಸ್ತೆಗಳ ಮೇಲೆ ಸಾಮಾನು ಇಡುವ ಪದ್ದತಿ ಮುಂದುವರೆಸಿದರು.ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುವುದನ್ನು ಗಮನಿಸಿದ ಉಭಯ ಅಧಿಕಾರಿಗಳು ಪಾದಚಾರಿ ರಸ್ತೆ ಮೇಲಿನ ಎಲ್ಲ ಸರಕು ಸಾಮಗ್ರಿಗಳನ್ನು ತೆರವುಗೊಳಿಸಿದರು.ಕೆಲವು ವರ್ತಕರು ಸ್ವಯಂ ಪ್ರೇರಣೆಯಿಂದ ರಸ್ತೆ ಮೇಲಿನ ತಮ್ಮ ಸಾಮಾನುಗಳನ್ನು ತೆಗೆದುಕೊಂಡರು.ನಂತರ ಮಾತನಾಡಿದ ನಗರ ಪೋಲಿಸ್ ಠಾಣೆ ಸಿಪಿಐ ಗುರುನಾಥ ಹೆಬ್ಬಾಳ ,ಇನ್ಮೂಂದೆ ವರ್ತಕರು ರಸ್ತೆ ಮೇಲೆ ಸಾಮಾನುಗಳನ್ನು ಇಡಬಾರದು,ದ್ವೀ ಚಕ್ರ,ನಾಲ್ಕು ಚಕ್ರದ ವಾಹನದ ಮಾಲೀಕರು ರಸ್ತೆ ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ನಿಲ್ಲಿಸಿದರೇ ಕಾನೂನಿನ ಪ್ರಕಾರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಅಪಘಾತ ತಪಿಸಲು ರಸ್ತೆ ನಿಯಮ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಪುರಸಭೆ ಪರಿಸರ ಅಭಿಯಂತರ ಸಂಗಮೇಶ ಕಾರಬಾರಿ ಮಾತನಾಡಿ,ಪಟ್ಟಣದ ಸ್ವಚ್ಚತೆಗೆ ಸಾರ್ವಜನಿಕರ ಸಹಕಾರ ಅಗತ್ಯ.ತಮ್ಮ ವೇಸ್ಟೇಜ್‍ಗಳನ್ನು ಡಸ್ಟಬೀನ್‍ನಲ್ಲಿ ಸಂಗ್ರಹಿಸಡಬೇಕು ಎಂದು ತಿಳಿ ಹೇಳಿದರು.
ಕಾರ್ಯಾಚರಣೆಯಲ್ಲಿ
ಹಿರಿಯ ಆರೋಗ್ಯ ಪರಿವೀಕ್ಷಕ ಸಂತೋಷ ಪಾಂಚಾಳ ,ಸಿಬ್ಬಂದಿ ರಾಜು ಸೇರಿದಂತೆ ಇತರೆ ಪುರಸಭೆ ಕರ್ಮಚಾರಿ ಭಾಗಿಯಾಗಿದ್ದರು.