ಪಾದಗಳ ಮಸಾಜ್‌ಗೆ ಟಿಪ್ಸ್

ಹಿಮ್ಮಡಿ ಒಡಕುಗಳಿಗೆ ಮಾಗಿದ ಬಾಳೆ ಹಣ್ಣಿನ ಬಳಕೆ ಮಾಡಬಹುದು. ವಾರದಲ್ಲಿ ಎರಡು ಬಾರಿ ಉಪಯೋಗಿಸುವುದರಿಂದ ಅತ್ಯಂತ ವೇಗವಾಗಿ ಒಳ್ಳೆಯ ಫಲಿತಾಂಶ ಕಾಣಬಹುದು.
? ಮೊದಲಿಗೆ ೧ ಮಾಗಿದ ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕಿವುಚಿ.
? ೨ ಟೀ ಸ್ಪೂನ್ ಜೇನು ತುಪ್ಪವನ್ನು ಕಿವುಚಿದ ಬಾಳೆ ಹಣ್ಣಿಗೆ ಮಿಶ್ರಣ ಮಾಡಿ
? ಹೀಗೆ ತಯಾರಾದ ಬಾಳೆ ಹಣ್ಣು ಮತ್ತು ಜೇನು ತುಪ್ಪದ ಪೇಸ್ಟ್ ಅನ್ನು ನಿಮ್ಮ ಅಂಗಾಲು ಮತ್ತು ಹಿಮ್ಮಡಿಗಳ ಮೇಲೆ ಹಚ್ಚಿ ಮಸಾಜ್ ಮಾಡಿ.
? ಸುಮಾರು ೨೦ರಿಂದ ೩೦ ನಿಮಿಷಗಳು ಇದನ್ನು ಒಣಗಲು ಬಿಡಬೇಕು.
? ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳಿ.
? ಬಾಳೆ ಹಣ್ಣು ಮತ್ತು ಜೇನು ತುಪ್ಪ ಎರಡರಲ್ಲೂ ನೈಸರ್ಗಿಕವಾದ ಮಾಯಿಶ್ಚರೈಸಿಂಗ್ ಗುಣ ಲಕ್ಷಣಗಳು ಅಡಗಿವೆ. ಇವು ಚರ್ಮದ ಮೇಲೆ ಅತ್ಯಂತ ಕೋಮಲವಾದ ವಾತಾವರಣವನ್ನು ನಿರ್ಮಾಣ ಮಾಡುತ್ತವೆ.
? ಜೇನು ತುಪ್ಪ ತನ್ನಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಹೊಂದಿದ್ದು, ಚರ್ಮದ ಮೇಲೆ ಒಂದು ಗಾಯದಿಂದ ಉಂಟಾಗುವ ಸೋಂಕನ್ನು ಇದು ತಡೆಗಟ್ಟುತ್ತದೆ ಮತ್ತು ಹಿಮ್ಮಡಿಯ ಒಡಕನ್ನು ದೂರ ಮಾಡುತ್ತದೆ.

? ಆಯುರ್ವೇದ ಪದ್ಧತಿಯಲ್ಲಿ ಸ್ವಲ್ಪ ಪರಿಚಯ ಹೊಂದಿದವರಿಗೆ ಗಿಡಮೂಲಿಕೆಗಳನ್ನು ಬಳಕೆ ಮಾಡಿಕೊಂಡು ಪಾದಗಳಿಗೆ ಮಸಾಜ್ ಮಾಡುವ ಮೂಲಕ ಸಮಸ್ಯೆಗಳನ್ನು ಹೇಗೆ ಹೋಗಲಾಡಿಸಿ ಕೊಳ್ಳಬೇಕು ಎಂಬುದರ ಬಗ್ಗೆ ಅರಿವಿರುತ್ತದೆ. ಅಂಗಾಲು ಗಳಿಗೆ ಮತ್ತು ಹಿಮ್ಮಡಿಗೆ ಮಸಾಜ್ ಮಾಡುವ ಪ್ರಕ್ರಿಯೆಯಿಂದ ಮಾನಸಿಕ ಒತ್ತಡ, ಮಾನಸಿಕ ಆತಂಕ, ಕಣ್ಣಿನ ದೃಷ್ಟಿ ಸಮಸ್ಯೆ, ನಿದ್ರಾಹೀನತೆ ಮತ್ತು ಇನ್ನು ಕೆಲವು ಬೇರೆ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತವೆ.