ಪಾತ್ರ ಜೀವಿಸುವ ತೆರೆ ಮೇಲಿನ‌ ಅಮ್ಮ..

” ಮೂರು ದಿನ “ಬ್ರಹ್ಮಗಂಟು” , ಮೂರು ದಿನ‌ “ಮನಸಾರೆ”. ಮದ್ಯದಲ್ಲಿ ಇದ್ದರೆ ಒಂದು ದಿನ “ನಮ್ಮನೆ ಯುವರಾಣಿ”, ಈ ನಡುವೆ ಸಿನಿಮಾ ಬರುತ್ತಿವೆ .ಡೇಟ್ಸ್ ಹೊಂದಿಸಿಕೊಂಡು ಅದನ್ನು ಮಾಡುತ್ತೇನೆ…”

ಹೀಗಾಗಿ ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದು ತಮ್ಮ ಕಿರುತೆರೆ,ಹಿರಿತೆರೆ ಬಣ್ಣದ ಬದುಕಿನ ದಿನಚರಿಯ ಪುಟಗಳನ್ನು ತಿರುವಿ ಹಾಕಿದರು ಹಿರಿಯ ನಟಿ ಹಾಗು ಯುವ ಕಲಾವಿದರ ಪಾಲಿನ ಅಮ್ಮ ಸ್ವಾತಿ. ಸದ್ಯ ನಟಿಸುತ್ತಿರುವ ಮೂರು ಧಾರಾವಾಹಿಗಳಲ್ಲಿ ಒಳ್ಳೆಯ ಪಾತ್ರ, ಕಲಾವಿದರು, ತಂಡ ಸಿಕ್ಕಿದೆ.ಖುಷಿ ಆಗುತ್ತಿದೆ.

ಸದ್ಯ ಕೋವಿಡ್ ಇರುವ ಹಿನ್ನೆಲೆಯಲ್ಲಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿಲ್ಲ.ಹೀಗಾಲೇ ಚಿತ್ರೀಕರಣ ಆಗಿರುವ ಕಂತುಗಳು ಇರುವದರಿಂದ ಅದನ್ನೇ ಬಳಸಿಕೊಳ್ಳುತ್ತಿದ್ದಾರೆ.ಮತ್ತೆ ಲಾಕ್ ಡೌನ್ ವಿಸ್ತರಣೆ ಆದರೆ ಇರುವುದೆಲ್ಲಾ ಖಾಲಿ.ಆಗ ಮರು ಪ್ರಸಾರ ಮಾಡುವ ಸಾದ್ಯತೆಗಳಿವೆ.

ಕೆಲವು ವಾಹಿನಿಗಳು ಚಿತ್ರೀಕರಣ ಮಾಡದಿದ್ದರೆ ಧಾರಾವಾಹಿ ನಿಲ್ಲಿಸುತ್ತೇವೆ ಎನ್ನುತ್ತಿದ್ದಾರೆ ಏನಾಗುತ್ತೊ ಗೊತ್ತಿಲ್ಲ ಗೊಂದಲ ಇದೆ ಎನ್ನುತ್ತಾರೆ ಅವರು. “ಮನಸಾರೆ” ವರ್ಷದಿಂದ ಬರುತ್ತಿದೆ. ದೇವಕಿ ಎನ್ನುವ ಮಲತಾಯಿ ಪಾತ್ರ. ಈ ಮೊದಲು ಸುನೀಲ್‌ ಪುರಾಣಿಕ್ ಮಾಡುತ್ತಿದ್ದ ಪಾತ್ರವನ್ನು ಈಗ ಹರೀಶ್ ಮಾಡ್ತಾ ಇದ್ದಾರೆ‌. ಅವರ ಎರಡನೇ ಹೆಂಡತಿ. ಮೊದಲ ಹೆಂಡತಿ ಹೆರಿಗೆ ಸಮಯಯದಲ್ಲಿ ಸತ್ತು ಹೋಗಿರುತ್ತಾಳೆ. ಆಕೆಗೆ ಹುಟ್ಟಿದ ಮಗು ಕಂಡರೆ ಇವರಿಗೆ ಆಗಲ್ಲ ಮಗಳೆಂದರೆ ದ್ವೇಷ.

ಇಂತಹ‌ ವ್ಯಕ್ತಿಗೆ ಎರಡನೇ ಹೆಂಡತಿಯಾಗಿ ಹೋಗುವ ದೇವಕಿ ಮೊದಲ ಹೆಂಡತಿ ಮಗುವನ್ನು ಸ್ವಂತ ಮಗುವಿಗಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಗಂಡನೋ ಮಗಳ ಅನ್ನುವ ಸಂದರ್ಭ ಬಂದಾಗ ಮಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ.

ಗಂಡನಿಗೆ ವಿರುದ್ದವಾಗಿ ನಿಂತು ಮದುವೆ ಮಾಡಿ ತಾನಿರುವ ಔಟ್ ಹೌಸ್‌ ನಲ್ಲಿ ಮನೆ ಕೊಡುತ್ತಾಳೆ. ಕಥೆ ಇಲ್ಲಿಯವರೆಗೆ ಬಂದಿದೆ ಎನ್ನುವ ವಿವರ ನೀಡಿದರು.

ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಮ್ಮನ ಪಾತ್ರ ಚೆನ್ನಾಗಿ ಮೂಡಿ ಬರುತ್ತಿದೆ. ನಮ್ಮನೆ ಯುವರಾಣಿಯಲ್ಲಿ “ಶಾಂತಲಾ” ಎನ್ನುವ ಡೈನಾಮಿಕ್ ಮಹಿಳೆ‌ ಪಾತ್ರ.ಮಗನಿಗೆ ಅಭದ್ರತೆ ಕಾಡಿದಾಗ ಆತ್ಮವಾಗಿ ಬಂದು ಧೈರ್ಯ ತುಂಬುವ ಪಾತ್ರ ಎಂದರು.

1994 ರಿಂದ 200 ತನಕ 430 ಧಾರಾವಾಹಿಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದೆ. 2014 ರಿಂದ ಎರಡನೇ ಇನ್ಸಿಂಗ್ ಅಮ್ಮನ ಪಾತ್ರಕ್ಕೆ ಮೀಸಲಾಗಿದ್ದೇನೆ.ವರ್ಷಕ್ಕೆ ಎರಡು ಮೂರರಂತೆ 21ಕ್ಕೂ ಹೆಚ್ಚು ಧಾರಾವಾಹಿ ನಟಿಸಿದ್ದೇನೆ ಎಂದು ಇಡೀ ಬಣ್ಣದ ಬದುಕಿನ ಜೀವನವನ್ನು ತೆರೆದಿಟ್ಟರು.

ಮನೆ ಕೆಲಸಕ್ಕೆ ಆದ್ಯತೆ

ಸದ್ಯ ಮನೆಯಲ್ಲಿರುವುದರಿಂದ ಮನೆಕೆಲಸಕ್ಕೆ ಸೀಮಿತವಾಗಿದ್ದೇನೆ. ಹೊಸ ಹೊಸ ಅಡುಗೆ ಪ್ರಯೋಗ ನಡೆಯುತ್ತದೆ‌. ಈ ಮಧ್ಯೆ ಶ್ಲೋಕ, ರುದ್ರಂ ಕಲಿಯುತಿದ್ದೇನೆ.ಜೊತೆಗೆ ಯೋಗ, ವ್ಯಾಯಾಮ ಒಟಿಟಿಯಲ್ಲಿ ಒಳ್ಳೆಯ ಚಿತ್ರವಿದ್ದರೆ ಇಡೀ ಮನೆಯವರೆಲ್ಲ ಕುಳಿತು ನೋಡುತ್ತೇವೆ. ಸದ್ಯ ಇದಿಷ್ಟು ಲಾಕ್ ಡೌನ್ ದಿನಚರಿ ಎಂದರು ಹಿರಿಯ ಕಲಾವಿದೆ ಸ್ವಾತಿ