
ಇಸ್ಲಮಾಬಾದ್, ಏ.2- ಪಾಕಿಸ್ತಾನದಲ್ಲಿ ವರ್ಷದಿಂದ ವರ್ಷಕ್ಕೆ ಹಣದುಬ್ಬರ ಪ್ರಮಾಣ ಏರಿಕೆಯಾಗುತ್ತಿದ್ದು ಕಳೆದ 60 ವರ್ಷಗಳ ನಂತರ ಈ ವರ್ಷ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ.ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.35.37 ರಷ್ಟು ಇದ್ದು ಅದರಲ್ಲಿಯೂ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದಲ್ಲಿ ಹಣದುಬ್ಬರ ಪ್ರಮಾಣ ಅತ್ಯಧಿಕವಾಗಿದೆ.ದಿನದಿಂದ ದಿನಕ್ಕೆ ಹೆಚ್ಚುತ್ತರುವ ಹಣದುಬ್ಬರ ನಿಭಾಯಿಸಲು ಪಾಕಿಸ್ತಾನದ ಸರ್ಕಾರ ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ. ಇದು ಸಹಜವಾಗಿ ಪಾಕಿಸ್ತಾನದಲ್ಲಿ ಮತ್ತಷ್ಟು ಆರ್ಥಿಕ ಬಿಕ್ಕಟ್ಟು ಮತ್ತು ಮುಗ್ಗಟ್ಟು ಎದುರಿಸುವಂತಾಗಿದೆ.ಪಾಕಿಸ್ತಾನ ಸರ್ಕಾರ ಸಾಲದ ಸುಳಿಗೆ ಸಿಲುಕಿದೆ. ಮತ್ತು ಕಠಿಣ ತೆರಿಗೆ ಸುಧಾರಣೆಗಳನ್ನು ಜಾರಿಗೊಳಿಸಬೇಕು ಮತ್ತು 6.5 ಶತಕೋಟಿ ಡಾಲರ್ ಬೇಲ್‍ಔಟ್‍ನ ಮತ್ತೊಂದು ಭಾಗವನ್ನು ಅನ್‍ಲಾಕ್ ಮಾಡಲು ಮತ್ತು ಡೀಫಾಲ್ಟ್ ಮಾಡುವುದನ್ನು ತಪ್ಪಿಸಲು ಆಶಿಸಿದರೆ ಉಪಯುಕ್ತತೆಯ ಬೆಲೆಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.ಆದಾಗ್ಯೂ, ಈ ಕ್ರಮಗಳು ಗಗನಕ್ಕೇರುತ್ತಿರುವ ಹಣದುಬ್ಬರಕ್ಕೆ ಕಾರಣವಾಗಿದ್ದು, ಇದು ದೇಶದಲ್ಲಿ ಆಹಾರ ಬಿಕ್ಕಟ್ಟನ್ನು ಉಂಟುಮಾಡಿದೆ.ಫೆಬ್ರವರಿ ತಿಂಗಳಲ್ಲಿ ಹಣದುಬ್ಬರ ಸೂಚ್ಯಂಕ ಶೇ.31.6ಕ್ಕೆ ತಲುಪಿತ್ತು. ಮಾರ್ಚ್ ತಿಂಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಇದರ ನಿಯಂತ್ರಣವೇ ಷಹಬಾಜ್ ಷರೀಫ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೆಲೆಗಳು ಕ್ರಮವಾಗಿ ಶೇ.32.97 ಮತ್ತು ಶೇ. 38.88 ರಷ್ಟುಹೆಚ್ಚಾಗಿದೆ. ಕಳೆದ ಹಲವು ತಿಂಗಳುಗಳಲ್ಲಿ ಗ್ರಾಹಕರ ಬೆಲೆಗಳು ತೀವ್ರವಾಗಿ ಏರಿದೆ, ಕಳೆದ ವರ್ಷ ಜೂನ್‍ನಿಂದ ವಾರ್ಷಿಕ ಹಣದುಬ್ಬರ ಶೇ. 20ಕ್ಕಿಂತ ಹೆಚ್ಚಿದೆ.