ಪಾಣೆಮಂಗಳೂರು ಸೇತುವೆ ಮೇಲೆ ಸ್ವಚ್ಛಗೊಳಿಸಿದ ಗೂಡಿನಬಳಿ ಯುವಕರು

ಬಂಟ್ವಾಳ, ಜೂ.೫- ತಾಲೂಕಿನ ಪಾಣೆಮಂಗಳೂರು ಹಳೆ ೨ನೇತ್ರಾವತಿ ಸೇತುವೆಯ ಎರಡೂ ಬದಿಗಳಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ಗೂಡಿನಬಳಿ ಪರಿಸರದ ಯುವಕರು ಸ್ವಚ್ಛಗೊಳಿಸುವ ಮೂಲಕ ಲಾಕ್ ಡೌನ್ ಬಿಡುವಿನ ವೇಳೆಯನ್ನು ಶ್ರಮದಾನದ ಮೂಲಕ ಸದುಪಯೋಪಡಿಸಿಕೊಂಡರು.
ಸತತ ಆರೇಳು ದಿನಗಳಿಂದ ನಿರಂತರ ಶ್ರಮದಾನ ಮಾಡುವ ಮೂಲಕ ಇಡೀ ಸೇತುವೆಯನ್ನು ಕಳೆಗಿಡಗಳಿಂದ ಮುಕ್ತಗೊಳಿಸಿದರು. ಸೇತುವೆ ಮೇಲೆ ಬೆಳೆದಿರುವ ಕಳೆ ಗಿಡಗಳಿಂದಾಗಿ ಮಳೆ ನೀರು ಸರಿಯಾಗಿ ಹರಿದು ಹೋಗದೆ ಸೇತುವೆಯ ಮೇಲೆ ಸಂಗ್ರಹಗೊಂಡು ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಇದೀಗ ಕಳೆಗಿಡಗಳ ಸ್ವಚ್ಛತೆಯಿಂತಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ಮೂಲಕ ವಾಹನ ಸವಾರರಿಗೆ ಉಪಕಾರವಾಗಿದೆ ಎಂದು ಫಿರೋಝ್ ಗೂಡಿನಬಳಿ ತಿಳಿಸಿದ್ದಾರೆ.