
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.13: ರಾಜ್ಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23ನೇ ಸಾಲಿನ 1000 ಸಂಪೂರ್ಣ ಸಾಕ್ಷರ ಗ್ರಾಮ ಪಂಚಾಯಿತಿ ಕಾರ್ಯಕ್ರಮದ ಅನಕ್ಷರಸ್ಥರಿಗೆ ಕಲಿಸುವ ಸ್ವಯಂ ಸೇವಕ ಬೋಧಕರಿಗೆ ಹಮ್ಮಿಕೊಂಡಿದ್ದ ಪಾಠ ಬೋಧನಾ ವಿಧಾನದ ತರಬೇತಿ ಕಾರ್ಯಗಾರಕ್ಕೆ ಇಂದು ಪಿ.ಡಿ.ಓ ಸುಮಲತಾ ಚಾಲನೆ ನೀಡಿ ವಿದ್ಯೆಯೇ ಬಾಳಿನ ಬೆಳಕು ಆದ್ದರಿಂದ ಸ್ವಯಂ ಸೇವಕರು ತಮಗೆ ವಹಿಸಿದ ಇಪ್ಪತ್ತು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಬೇಕಾದ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಬಿ.ಆರ್. ಪಿ ವಸಂತ, ಜ್ಯೋತಿ, ಸಿ.ಆರ್. ಪಿ ಶ್ರೀನಿವಾಸ ರೆಡ್ಡಿ, ಶಿಕ್ಷಕರಾದ ಬಸವರಾಜ, ದೌಲತ್ ಬಾನು, ಕೃಷ್ಣವೇಣಿ,ಬಾಷಾ,ಗುರುಪ್ರಸಾದ್ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.