ಪಾಟೀಲರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಇಂಡಿ:ಮೇ.18: ಲಿಂಬೆ ನಾಡು ಇಂಡಿ ವಿಧಾನಸಭಾ ಮತಕ್ಷೇತ್ರ ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲೂಕು ಕೇಂದ್ರವಾಗಿದ್ದು,ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಕ್ಷೇತ್ರವನ್ನು ರಾಜಕೀಯವಾಗಿ ಕಡೆಗಣಿಸಲಾಗಿದೆ. ಈ ಬಾರಿ ಹ್ಯಾಟ್ರೀಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಪ್ರಥಮ ಹಂತದಲ್ಲಿಯೇ ಸಚಿವ ಸ್ಥಾನ ನೀಡಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ಮುಖಂಡ ಪ್ರಶಾಂತ ಕಾಳೆ ಪ್ರಕಟಣೆಯಲ್ಲಿ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.

ಇಂಡಿ ತಾಲೂಕನ್ನು ಜಿಲ್ಲೆ ಮಾಡುವ ಕನಸು ಕಂಡಿರುವ ,ನೀರಾವರಿ ಯೋಜನೆ ರೂಪಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಲು ಫಣತೊಟ್ಟಿರುವ ಅಭಿವೃದ್ದಿಪರ ಚಿಂತನೆ,ದಿನದಲಿತರು,ಬಡವರು,ಅಲ್ಪಸಂಖ್ಯಾತರು,ಮಹಿಳೆಯರು,ರೈತರ ಪರ ಅಭಿವೃದ್ದಿಯ ಚಿಂತನೆಯನ್ನು ಹೊಂದಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗ ಸರ್ವ ವಿಧದಲ್ಲಿ ಅಭಿವೃದ್ದಿ ಹೊಂದಿ,ರಾಜಕೀಯವಾಗಿ ಸಚಿವ ಸ್ಥಾನದಿಂದ ವಂಚಿತಗೊಂಡಿರುವ ಈ ಭಾಗಕ್ಕೆ ನ್ಯಾಯ ಕೊಡಬೇಕಾದರೆ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಪ್ರಶಾಂತ ಕಾಳೆ, ಎಸ್.ಜೆ.ಮಾಡ್ಯಾಳ, ಮಲಕಪ್ಪ ತಾಂಬಾ, ಸಂತೋಷ ಪರಸೆನವರ, ಅರ್ಜುನ ಹೊಸಮನಿ, ದತ್ತು ಕೋಳಿ ಇತರರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.