ಪಾಟೀಲಜೀಯವರ ಕಾರ್ಯ ಶ್ಲಾಘನೀಯವಾದದು:ದಂಡಿಗಿಮಠ

ಸೈದಾಪುರ:ಸೆ.4:ಹಿಂದುಳಿದ ಈ ಭಾಗದ ಪಗ್ರತಿಗಾಗಿ ಬಸವರಾಜ ಪಾಟೀಲ ಸೇಡಂ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದು ಎಂದು ಸೈದಾಪುರ ವಿದ್ಯಾ ವರ್ಧಕ ಡಿ.ಎಲ್.ಎಡ್ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಭಿಪ್ರಾಯಪಟ್ಟರು.

ಯಾದಗಿರಿ ನಗರದ ಬಸವೇಶ್ವರ ಕಲ್ಯಾಣ ಮಂಟದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಯಾದಗಿರಿ ಜಿಲ್ಲಾ ವತಿಯಿಂದ ಹಮ್ಮಿಕೊಂಡ ಯುವಕ ಯುವತಿಯರಿಗೆ ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಕಾರ್ಯಗಾರದಲ್ಲಿ ಸೈದಾಪುರ ಗ್ರಾಮಸ್ಥರೊಂದಿಗೆ ಭಾಗವಹಿಸಿ ಮಾತನಾಡಿದರು. ಹಿಂದುಳಿದ ಭಾಗವೆಂದು ನಮ್ಮನ್ನು ನಾವೇ ಪರಿಗಣಿಸುತ್ತಿರುವ ಸಂದರ್ಭದಲ್ಲಿ ಯುವಕರಿಗೆ ತಮ್ಮ ಸಾಮಾಥ್ರ್ಯ ಬಗಗೆ ಜಾಗೃತಿ ಮೂಡಿಸುವ ಮೂಲಕ ಈ ಭಾಗವನ್ನು ಕಲ್ಯಾಣ ಕರ್ನಾಟಕ ಮಾಡುವಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸವನ್ನು ಆಯೋಜಿಸಿ ಭಾಗವಹಿಸಿದವರೆಗೆ ಪುಸ್ತಕಗಳನ್ನು ವಿತರಣೆ ಮಾಡಿ ಸ್ವಾವಲಂಬನೆ ಬದಕನ್ನು ಕಂಡುಕೊಳ್ಳುವ ಬಗಗೆ ಆಯೋಜಿಸಿದ ಕಾರ್ಯಾಗಾರ ಬಹಳ ಉಪಯುಕ್ತವಾಗಿದ್ದೂ ಇದರ ಸದುಪಯೋಗ ನಮ್ಮದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಯಾದಗಿರಿ ಜಿಲ್ಲಾ ನಿರ್ಧೇಶಕರಾದ ನೀಲಕಂಠರಾಯ ಯಲ್ಹೇರಿ, ತಾಲೂಕಾ ಸಂಯೋಜಕ ಭೀಮಣ್ಣ ವಡವಟ್, ಉಪನ್ಯಾಸಕ ಹಣಮರೆಡ್ಡಿ ಮೋಟ್ನಳ್ಳಿ ಸೇರಿದಂತೆ ಸೈದಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.