ಪಾಕ್ ಮಾಜಿ ಸಚಿವನಿಗೆ ಸ್ಮೃತಿ ಇರಾನಿ ತರಾಟೆ

xr:d:DAFex_m4P4k:860,j:946150250554141128,t:23062311

ಲಕ್ನೊ.ಮೇ೮-ಪಾಕಿಸ್ತಾನದ ಮಾಜಿ ಸಚಿವ ರಾಹುಲ್ ಗಾಂಧಿಯನ್ನು ಶ್ಲಾಘಿಸಿದಕ್ಕೆ ಕೇಂದ್ರ ಸಚಿವ ಸ್ಮೃತಿ ಇರಾನಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪಾಕ್‌ನ ಮಾಜಿ ಸಚಿವ ಚೌಧರಿ ಫಾವದ್ ಹುಸೇನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳಿದ್ದರು.
ಜತೆಗೆ ಸ್ಮೃತಿ ಇರಾನಿ ಅವರನ್ನು ಸೋಲಿಸಬೇಕೆಂದು ಹೇಳಿದ್ದರು.
ಈ ಕುರಿತು ರ್‍ಯಾಲಿವೊಂದರಲ್ಲಿ ಮಾತನಾಡಿದ ಸಚಿವೆ ಸ್ಮೃತಿ ಇರಾನಿ, ನಿಮಗೆ ಪಾಕಿಸ್ತಾನವನ್ನು ನಿಭಾಯಿಸಲು ಆಗುತ್ತಿಲ್ಲ. ಆದರೆ ಅಮೇತಿ ಬಗ್ಗೆ ಚಿಂತೆ ಯಾಕೆ
ಎಂದು ಪ್ರಶ್ನಿಸಿದರು. ನನ್ನ ಧ್ವನಿ ಪಾಕಿಸ್ತಾನಕ್ಕೆ ತಲುಪುವುದಾದರೆ, ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ. ಅಮೇತಿಯಲ್ಲಿ ಪ್ರಧಾನಿ ಮೋಧಿ ಅವರು
ಎ.ಕೆ ೨೦೩ ರೈಫಲ್ ತಯಾರಿಸುವ ಕಾರ್ಖಾನೆ ನಿರ್ಮಿಸಿದ್ದಾರೆ. ಗಡಿಯಲ್ಲಿ ಉಗ್ರರನ್ನ ಸದೆಬಡಿಯಲು ಬಳಸುತ್ತಾರೆ ಎಂದರು.
ನಿಮಗೂ ಪಾಕಿಸ್ತಾನಕ್ಕೂ ಏನು ಸಂಬಂಧ ಎಂದು ನಾನು ರಾಹುಲ್ ಗಾಂಧಿ ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದರು.