ಪಾಕ್ ಬಣ್ಣ ಬಯಲು ಮಾಡಿದ ಭಾರತ

ನವದೆಹಲಿ, ಸೆ.೨೫- ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ ವಿಷಯದಲ್ಲಿ ಪಾಕಿಸ್ತಾನ ಜಾಗತಿಕವಾಗಿ ಗುರುತಿಸಿಕೊಂಡಿದೆ ಎಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಬಣ್ಣವನ್ನು ಭಾರತ ಬಯಲುಮಾಡಿದೆ.

ಈ ಮೂಲಕ ನೆರೆಯ ದೇಶ ಪಾಕಿಸ್ತಾನದ ಭಯೋತ್ಪಾದಕರಿಗೆ ಸದಾ ಬೆಂಬಲ ನೀಡುತ್ತಿದೆ ಎನ್ನುವ ವಿಷಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ್ತೊಮ್ಮೆ ಪ್ರಸ್ತಾಪ ಮಾಡಿದೆ.

ಪಾಕಿಸ್ತಾನ ಹಲವು ವರ್ಷಗಳಿಂದ ಪ್ರತ್ಯಕ್ಷವಾಗಿಯೇ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ. ಜೊತೆಗೆ ಅವರಿಗೆ ಆಶ್ರಯ ಸೇರಿದಂತೆ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಕೂಡ ಭಾರತ, ಪಾಕಿಸ್ತಾನದ ವಿರುದ್ಧ ನೇರ ಆರೋಪ ಮಾಡಿದೆ.

ಪಾಕಿಸ್ತಾನ ಸ್ಥಾಪಿತ ಇತಿಹಾಸ ಮತ್ತು ಭಯೋತ್ಪಾದಕರನ್ನು ಆಶ್ರಯಿಸುವ , ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ನೀತಿಯನ್ನು ಸದಾ ಹೊಂದಿದೆ ಎಂದು ಭಾರತ ಆರೋಪಿಸಿದೆ.

ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕರೆಂದು ಗುರುತಿಸಿಕೊಂಡವರು ಮತ್ತು ನಿಷೇಧಿಸಲ್ಪಟ್ಟವರಿಗೆ ಪಾಕಿಸ್ತಾನ ಆಥಿತ್ಯ ನೀಡುವ ಮೂಲಕ ಭಯೋತ್ಪಾದಕರನ್ನ ಬಹಿರಂಗವಾಗಿಯೇ ಬೆಂಬಲಿಸುತ್ತಿದೆ ಎಂದು ಅಂಕಿ-ಸಂಖ್ಯೆಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ವಿಷಯವನ್ನು ಜಗತ್ತಿನ ನಾಯಕರ ಎದುರು ಬಿಚ್ಚಿಟ್ಟಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪರವಾಗಿ ವಿಷಯ ಮಂಡನೆ ಮಾಡಿದ ಕಾರ್ಯದರ್ಶಿ ಸ್ನೇಹ ದುಬೆ, ಭಯೋತ್ಪಾದಕರನ್ನು ಪಾಕಿಸ್ತಾನ ಬೆಂಬಲಿಸಿಕೊಂಡು ಬರುತ್ತಿರುವುದಕ್ಕೆ ಇತ್ತೀಚೆಗೆ ತಾಲಿಬಾನ್ ಉಗ್ರರ ಹಲವು ನಾಯಕರು ತಾಜಾ ಉದಾಹರಣೆ ಎಂದು ಹೇಳಿರುವ ಭಾರತ, ಜಾಗತಿಕ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದ ಒಸಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದು ಅಮೇರಿಕಾ ಸೇನಾಪಡೆಯಿಂದ ಹತ್ಯೆಯಾಗಿರುವ ಲಾಡೆನ್ ಅವರನ್ನು ಪಾಕಿಸ್ತಾನ ನಾಯಕತ್ವ ಇಂದಿಗೂ “ಹುತಾತ್ಮ” ಎಂದು ವೈಭವೀಕರಿಸುತ್ತದೆ ಎಂದು ಆರೋಪಿಸಿದ್ದಾರೆ.

ಭಯೋತ್ಪಾದಕರನ್ನು ಮಟ್ಟ ಹಾಕುತ್ತೇವೆ ಎಂದು ಮುಖವಾಡ ಹಾಕಿಕೊಂಡು ಹಿಂಬದಿಯಿಂದ ಭಯೋತ್ಪಾದಕರಿಗೆ ಪಾಕಿಸ್ತಾನ , ಆಶ್ರಯ ನೀಡುತ್ತದೆ ಇದು ಅನುಸರಿಸುತ್ತಿರುವ ದ್ವಂದ್ವ ನೀತಿ ಇಡೀ ಜಗತ್ತಿಗೆ ಗೊತ್ತಿದೆ ಎಂದು ಅವರು ದೂರಿದ್ದಾರೆ

ಭಾರತದ ಅವಿಭಾಜ್ಯ ಅಂಗ:

ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಇದರಲ್ಲಿ ಯಾವುದೇ ಎರಡು ಮಾತಿಲ್ಲ ಎನ್ನುವ ವಿಷಯವನ್ನು ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಪುನರುಚ್ಚಾರ ಮಾಡಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಭಾರತದ ಸ್ನೇಹ ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ ಅವರು ಈ ವಿಷಯದಲ್ಲಿ ಪಾಕಿಸ್ತಾನ ಪದೇಪದೇ ಜಾಗತಿಕವಾಗಿ ಗೊಂದಲ ಸೃಷ್ಟಿ ಮಾಡುವುದು ಒಳ್ಳೆಯದಲ್ಲ ಭಾರತದ ಆಂತರಿಕ ವಿಷಯದಲ್ಲಿ ತಲೆ ಹಾಕುವುದು ಸರಿಯಲ್ಲ ಎಂದಿದ್ದಾರೆ.

ಜಮ್ಮು-ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಪದೇಪದೇ ಗೊಂದಲ ಸೃಷ್ಟಿ ಮಾಡುವುದಾಗಲಿ ಅಥವಾ ತಮ್ಮದು ಎಂದು ವಾದಮಾಡುವ ಹುಚ್ಚುತನದ ನಿರ್ಧಾರವನ್ನು ಬಿಡುವುದು ಒಳಿತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ