ಪಾಕ್ ಪ್ರಧಾನಿಗೆ ಇರ್ಫಾನ್ ತಿರುಗೇಟು

ನವದೆಹಲಿ, ನ ೧೩- ಪ್ರಸಕ್ತ ಸಾಲಿನ ಟಿ೨೦ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ವಿರುದ್ಧ ಸೋಲುಂಡ ಬಳಿಕ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಭಾರತ ತಂಡವನ್ನ ನಿಂದಿಸಿ ಮಾಡಿದ ಟ್ವೀಟ್ ಎಲ್ಲೆಡೆ ವೈರಲ್ ಆಗಿ ಅನೇಕ ಕೆಂಗಣ್ಣಿಗೆ ಗುರಿಯಾಗಿತ್ತು.
ಟಿ೨೦ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲುತ್ತಿದ್ದಂತೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್ ಮೂಲಕ ಕಾಲೆಳೆದಿದ್ದರು. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಇದಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ತಿರುಗೇಟು ನೀಡಿದ್ದಾರೆ.
ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದ ನಂತರ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಟ್ವೀಟ್ ಮಾಡಿದ್ದು, ಇದೇ ಭಾನುವಾರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪೈಪೋಟಿ ನಡೆಸಲಿವೆ. ಆದ್ರೆ, ಇದು ಭಾನುವಾರ ೧೫೨/೦ ವಿರುದ್ಧ ೧೭೦/೦ ಪಂದ್ಯ ನಡೆಯಲಿದೆ ಎಂದು ಶಹಬಾಜ್ ಷರೀಫ್ ವ್ಯಂಗ್ಯವಾಗಿ ಬರೆದಿದ್ದಾರೆ. ವಾಸ್ತವವಾಗಿ, ಕಳೆದ ವರ್ಷ ಟಿ೨೦ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತವನ್ನ ೧೦ ವಿಕೆಟ್‌ಗಳಿಂದ ಸೋಲಿಸಿತು ಮತ್ತು ಈ ವರ್ಷ ಇಂಗ್ಲೆಂಡ್ ಭಾರತವನ್ನ ೧೦ ವಿಕೆಟ್‌ಗಳಿಂದ ಸೋಲಿಸಿತು.
ಶಹಬಾಜ್ ಷರೀಫ್ ಈ ಟ್ವೀಟ್ಗೆ ಪ್ರತಿಕ್ರಿಯಿಸಿ ಇರ್ಫಾನ್ ಪಠಾಣ್, ’ಇದೇ ನಮ್ಮ ಮತ್ತು ನಿಮ್ಮ ನಡುವೆ ಇರುವ ವ್ಯತ್ಯಾಸವಾಗಿದೆ. ನಮ್ಮೊಂದಿಗೆ ನಾವು ಸಂತೋಷವಾಗಿದ್ದೇವೆ. ಬೇರೊಬ್ಬರ ಸೋಲಿನಲ್ಲಿ ನೀವು ಸಂತೋಷಪಡುತ್ತಿದ್ದೀರಿ. ಆದ್ದರಿಂದಲೇ ನೀವು ನಿಮ್ಮ ದೇಶದ ಪರಿಸ್ಥಿತಿಯನ್ನ ಉತ್ತಮಪಡಿಸುವತ್ತ ಗಮನಹರಿಸುತ್ತಿಲ್ಲ ಎಂದು ತಿವಿದಿದ್ದಾರೆ. ಇರ್ಫಾನ್ ಪಠಾಣ್ ಅವ್ರ ಈ ಟ್ವೀಟ್ ವೈರಲ್ ಆಗಿದ್ದು, ಭಾರತೀಯ ಅಭಿಮಾನಿಗಳು ಇದನ್ನ ಸಾಕಷ್ಟು ಶ್ಲಾಘಿಸಿದ್ದಾರೆ.