ಪಾಕ್ ಪರ ಘೋಷಣೆ: ಆರೋಪ; ಮೂವರಿಗೆ ಜಾಮೀನು ಮಂಜೂರು


ಬೆಳ್ತಂಗಡಿ, ಎ.೨೩- ಗ್ರಾ.ಪಂ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ಸಂದರ್ಭ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪದಲ್ಲಿ ಬಂಧಿತರಾಗಿದ್ದ ಮೂವರು ಎಸ್.ಡಿ.ಪಿ.ಐ ಕಾರ್ಯಕರ್ತರಿಗೆ ಮಂಗಳೂರಿನ ಸೆಷನ್ ಕೋರ್ಟ್ ಶರತ್ತು ಬದ್ಧ ಜಾಮೀನು ನೀಡಿದೆ.
ದಾವೂದ್, ಇಸಾಕ್ ಹಾಗೂ ಹರ್ಷಾದ್ ಗುರುವಾಯನಕೆರೆ ಬಿಡುಗಡೆಗೊಂಡವರು. ಕಳೆದ ಡಿಸೆಂಬರ್ ೩೧ ರಂದು ಉಜಿರೆಯ ಮತ ಎಣಿಕೆ ಕೇಂದ್ರದ ಬಳಿ ಎಸ್‌ಡಿಪಿಐ ಅಭ್ಯರ್ಥಿಗಳು ಜಯಗಳಿಸಿದ ವೇಳೆ ಕಾರ್ಯಕರ್ತರು ವಿಜಯೋತ್ಸವ, ಸಂಭ್ರಮಾಚರಣೆ ಕೈಗೊಂಡಿದ್ದರು. ಈ ವೇಳೆ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ವೀಡಿಯೋವೊಂದು ವೈರಲ್ ಆದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದರು. ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.