ಪಾಕ್ ನಟಿಯಿಂದ ಕ್ರಿಕೆಟಿಗರ ಪ್ರಶಂಸೆ

ನವದೆಹಲಿ.ಅ೨೦:ಪುಣೆಯಲ್ಲಿ ನಡೆದ ವಿಶ್ವಕಪ್ ಟೂರ್ನಿಯ ೧೭ನೇ ಪಂದ್ಯದಲ್ಲಿ ಭಾರತ ಸೋಲಿಸಲು ಬಾಂಗ್ಲಾ ಕ್ರಿಕೆಟಿಗರಿಗೆ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ಬಿಗ್ ಆಫರ್ ಕೊಟ್ಟಿದ್ದಳು. ಇದೀಗ ಭಾರತ ವಿರುದ್ಧ ಸೋಲಿನ ಬಳಿಕವೂ ನಟಿ ಪ್ರತಿಕ್ರಿಯಿಸಿದ್ದಾಳೆ.
ಭಾರತ ವಿರುದ್ಧ ಬಾಂಗ್ಲಾ ಸೋತ ಬಳಿಕ ಎಕ್ಸ್ ನಲ್ಲಿ ಬರೆದುಕೊಂಡಿರುವ ಮಾಡಿದ ನಟಿ, ಬಾಂಗ್ಲಾ ಟೈಗರ್ಸ್ ಚೆನ್ನಾಗಿ ಆಡಿದ್ದೀರಿ. ಭಾರತದ ವಿರುದ್ಧ ಕನಿಷ್ಠ ಪಕ್ಷ ಅವರದ್ದೇ ನೆಲದಲ್ಲಿ ಒಳ್ಳೆಯ ಸವಾಲು ನೀಡಿದ್ದೀರಿ ಎಂದು ಹೊಗಳಿದ್ದಾಳೆ. ಶಿನ್ವಾರಿ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಭಾರತೀಯ ಕ್ರೀಡಾಭಿಮಾನಿಗಳು ಪಾಕ್ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಶಿನ್ವಾರಿ ಆಫರ್ ಏನು?: ಇನ್ ಶಾ ಅಲ್ಲಾ, ನನ್ನ ಬಾಂಗ್ಲಾ ಬಂಧು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲಿ. ಆಗ ನಾನು ಢಾಕಾಗೆ ಭೇಟಿ ನೀಡಿ ಅಲ್ಲಿ ಬೆಂಗಾಲಿ ಹುಡುಗರೊಂದಿಗೆ ಡಿನ್ನರ್ ಡೇಟ್ ಮಾಡುವೆ ಎಂದು ಶಿನ್ವಾರಿ ಆಫರ್ ನೀಡಿದ್ದಳು. ಅಲ್ಲದೆ ಭಾರತ ತಂಡ ವಿಶ್ವಕಪ್‌ನ ಸೆಮಿಫೈನಲ್‌ನಲ್ಲೇ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿದ್ದಳು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್‌ನಲ್ಲಿ ಆಡಲಿವೆ ಎಂದಿದ್ದಾಳೆ. ಜೊತೆಗೆ ಪಾಕ್ ತಂಡ ವಿಶ್ವಕಪ್ ಎತ್ತಿಹಿಡಿಯುವ ಕನಸನ್ನೂ ಹಂಚಿಕೊಂಡಿದ್ದಳು.