ಪಾಕ್ ದಾಳಿ: ನಾಲ್ವರು ಭಾರತೀಯ ಸೈನಿಕರು ಸೇರಿ‌ 7 ಮಂದಿ ಸಾವು

ಶ್ರೀನಗರ,ನ. 13- ಜಮ್ಮು-ಕಾಶ್ಮೀರದ ಕಡೆ ಪಾಕಿಸ್ತಾನ ಅಪ್ರಚೋದಿತ ಶೆಲ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ 4 ಸೈನಿಕರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.

4 ಸೈನಿಕರು ಹುತಾತ್ಮರಾಗಿರುವುದೂ ಸೇರಿ ಮೂರು ನಾಗರಿಕರು ಪಾಕಿಸ್ತಾನದ ದಾಳಿಗೆ ಬಲಿಯಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಬಾರಾಮುಲ್ಲಾ ವಲಯದ ನಂಬಾಲದಲ್ಲಿ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆ ಮೋಟಾರ್ ಬೈಕ್ ಗಳು ಮತ್ತು ಇನ್ನಿತರ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಹಾಜಿ ಪೀರ್ ವಲಯದಲ್ಲಿ ಭದ್ರತಾ ಪಡೆಯ ಸಬ್ ಇನ್ಸ್ ಪೆಕ್ಟರ್ ಮತ್ತು ಒರ್ವ ಜವಾನ್ ಪಾಕ್ ಗುಂಡಿನ ದಾಳಿಗೆ ಪಟ್ಟಿದ್ದಾರೆ ಎಂದು ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.

ಬಾರಮುಲ್ಲಾ ಜಿಲ್ಲೆಯ ಉರಿ ವಲಯದ ಕಮಲ್ ಕೋಟೆ ಪ್ರದೇಶದಲ್ಲಿ ಇಬ್ಬರು ನಾಗರಿಕರು ಪಾಕಿಸ್ತಾನದ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಬಾಲಾಕೋಟ್ ನಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿರೋಧ:
ಪಾಕಿಸ್ತಾನದ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ತಿರುಗೇಟು ನೀಡಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

7 ಪಾಕ್ ಕಮಾಂಡರ್ ಹತ್ಯೆ:
ಭಾರತೀಯ ಸೇನಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಆರರಿಂದ ಏಳು ಮಂದಿ ಪಾಕಿಸ್ತಾನ ಕಮಾಂಡರ್ ಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಜೊತೆಗೆ ಪಾಕಿಸ್ತಾನ ಸೇನೆಯ ಹತ್ತರಿಂದ ಹನ್ನೆರಡು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.