ಪಾಕ್ ಐವರು ಉಗ್ರರ ಹತ್ಯೆ

ಲಾಹೋರ್, ಆ ೧- ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಯಲ್ಲಿ ನಿರತರಾಗಿದ್ದ ಬಲೂಚಿಸ್ತಾನ್ ರಿಪಬ್ಲಿಕನ್ ಆರ್ಮಿ ಸೇನೆಯ ಐವರು ಉಗ್ರರನ್ನು ಪಾಕಿಸ್ತಾನ ಸೇನಾ ಪಡೆ ಹೊಡೆದು ಉರುಳಿಸಿದೆ.
ರಾಜನ್ಪುರ್ ರಸ್ತೆಯಲ್ಲಿರುವ ಅರಬ್ಬಿತಿಬ್ಬಾದಲ್ಲಿ ೮ಕ್ಕೂ ಹೆಚ್ಚು ಬಲೂಚಿಸ್ತಾನದ ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದ ಮಾಹಿತಿಯನ್ನು ಆಧರಿಸಿ ಪಾಕಿಸ್ತಾನ ಸೇನಾ ಪಡೆ ಉಗ್ರರ ಮೇಲೆ ದಾಳಿ ನಡೆಸಿ ೮ ಮಂದಿಯಲ್ಲಿ ೫ ಮಂದಿಯನ್ನು ಹೊಡೆದು ಉರುಳಿಸಿದೆ.
ಗುಂಡಿನ ಚಕಮಕಿಯಲ್ಲಿ ಐದು ಮಂದಿ ಪೊಲೀಸರನ್ನು ಉಗ್ರರು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಗಳು, ಪಂಜಾಬ್ ಪ್ರಾಂತ್ಯದ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ಸೇನೆ ಜೊತೆಯಾಗಿ ಕಾರ್ಯಾಚರಣೆ ನಡೆಸಿ ಐವರು ಬಲೂಚಿಸ್ತಾನದ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.
ಬಲೂಚಿಸ್ತಾನದ ರಿಪಬ್ಲಿಕನ್ ಆರ್ಮಿ ಸಂಘಟನೆ ಕಟ್ಟಿಕೊಂಡು ಭಯೋತ್ಪಾದನೆ ಬಲೂಚಿಸ್ತಾನದ ಉಗ್ರರು ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಖಚಿತ ಮಾಹಿತಿಯನ್ನು ಆಧರಿಸಿ ರಾಜನ್ಪುರ್ ವಲಯದಲ್ಲಿ ಐವರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.
ಮೂವರು ಪರಾರಿ
ಬಲೂಚಿಸ್ತಾನ ಉಗ್ರರ ಮೇಲೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಬಲಿಯಾಗಿದ್ದು ಮೂವರು ಪರಾರಿಯಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪರಾರಿಯಾಗಿರುವ ಉಗ್ರರಿಗಾಗಿ ಶೋಧಾ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಬಲೂಚಿಸ್ತಾನ ಉಗ್ರರ ಕೃತ್ಯಗಳ ವಿರುದ್ಧ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಬಲೂಚಿಸ್ತಾನ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಐವರು ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದರು.