
ಮುಂಬೈ,ಮೇ.೫- ಪುಣೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಯೋಗಾಲಯದ ಹಿರಿಯ ವಿಜ್ಞಾನಿಯೊಬ್ಬರನ್ನು ಬೇಹುಗಾರಿಕೆ ಮತ್ತು ಶಂಕಿತ ಮಹಿಳಾ ಪಾಕಿಸ್ತಾನಿ ಗುಪ್ತಚರ ಏಜೆಂಟ್‌ನೊಂದಿಗೆ ಭದ್ರತಾ-ಸೂಕ್ಷ್ಮ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ವಿಜ್ಞಾನಿಯ ವಾಟ್ಸಾಪ್‌ನಲ್ಲಿ ಧ್ವನಿ ಸಂದೇಶಗಳು ಮತ್ತು ವೀಡಿಯೊ ಕರೆಗಳ ಮೂಲಕ ಪಾಕಿಸ್ತಾನಿ ಕಾರ್ಯಕರ್ತನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ.
ಅಧಿಕೃತ ರಹಸ್ಯ ಕಾಯಿದೆಯ ಸೆಕ್ಷನ್ ೩ ಬೇಹುಗಾರಿಕೆ ಅಡಿ ಮತ್ತು ಸೆಕ್ಷನ್ ೫ ರ ಅಡಿ ಮಾಹಿತಿಗಳ ತಪ್ಪಾದ ಸಂವಹನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಆರೋಪದಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮೇ.೯ ರ ವರೆಗೆ ನ್ಯಾಯಾಂಗ ಬಂಧನ:
ಬಳಿಕ ವಿಜ್ಞಾನಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ವಿಶೇಷ ನ್ಯಾಯಾಧೀಶ ಎಸ್ ಆರ್ ನವಂದರ್ ಅವರ ನ್ಯಾಯಾಲಯವು ಮೇ ೯ ರವರೆಗೆ ಭಷ್ಟಾಚಾರ ನಿಗ್ರಹ ದಳದ- ಎಟಿಎಸ್ ಕಸ್ಟಡಿಗೆ ನೀಡಿದೆ.
ದೆಹಲಿಯ ಡಿಆರ್‌ಡಿಒ ವಿರಕ್ಷಣಾ ಮತ್ತು ಭದ್ರತಾ ಕಚೇರಿಯ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತಡರಾತ್ರಿ ವಿಜ್ಞಾನಿಯ ಬಂಧಿಸಲಾಗಿದೆ.
೫೯ ವರ್ಷದ ವಿಜ್ಞಾನಿ ಪಾಕಿಸ್ತಾನಿ ಆಪರೇಟಿವ್‌ನೊಂದಿಗೆ ಕ್ಷಿಪಣಿಯ ಛಾಯಾಚಿತ್ರ ಅದರ ಸ್ಥಳದೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವು ವೈಯಕ್ತಿಕ ಚಿತ್ರಗಳನ್ನು ನಂತರ ಅವನನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಲಾಗಿದೆ ಎನ್ನಲಾಗಿದೆ.
ಫೆಬ್ರವರಿ ೨೪ ರಂದು ಡಿಆರ್‌ಡಿಒ ತನಿಖಾ ಅಧಿಕಾರಿಯೊಬ್ಬರು ವಿಜ್ಞಾನಿಗೆ ಸೇರಿದ ಲ್ಯಾಪ್‌ಟಾಪ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು ಮತ್ತು ಅದರ ಫೊರೆನ್ಸಿಕ್ ವಿಶ್ಲೇಷಣೆಯು ವಿಜ್ಞಾನಿಗಳು ಹನಿಟ್ರ್ಯಾಪ್‌ನಲ್ಲಿ ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರೊಂದಿಗೆ ಮಾಹಿತಿ ಹಂಚಿಕೊಂಡಿರುವುದನ್ನು ದೃಢಪಡಿಸಿದ್ದಾರೆ.
ದೆಹಲಿ ಮೂಲದ ಡಿಆರ್‌ಡಿಒ ವಕ್ತಾರ ವಿ ಕೆ ಕೌಶಿಕ್ ಅವರು “ಈ ಹಂತದಲ್ಲಿ” ಬಂಧನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಬಂಧಿತ ವ್ಯಕ್ತಿಯ ಹಿರಿಯ ಸಹೋದ್ಯೋಗಿಯೊಬ್ಬರು “ಕ್ಷಿಪಣಿಗಳು ಸೇರಿದಂತೆ ವಿವಿಧ ಲಾಂಚರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು” ಎಂದಷ್ಟೇ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ದಶಕಗಳಲ್ಲಿ ಕೆಲವು ದೊಡ್ಡ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅತ್ಯುತ್ತಮ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ” ಎಂದು ತಿಳಿಸಿದ್ದಾರೆ.
.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪಾಕಿಸ್ತಾನಿ ಕಾರ್ಯಕರ್ತ ಮಹಿಳೆಯೊಬ್ಬರನ್ನು ಬಂಧಿಸಿ ವಿಜ್ಞಾನಿಯಿಂದ ಮಾಹಿತಿ ಪಡೆದಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.