ಪಾಕ್ ಉಗ್ರರ ಕೇಂದ್ರ: ಜೈಶಂಕರ್ ವಾಗ್ದಾಳಿ

ನವದೆಹಲಿ,ಜ.೩- ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಹಿಂದೂ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ ಕ್ರಮಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ತೀವ್ರವಾಗಿ ಖಂಡಿಸಿದ್ದು ಪಾಕಿಸ್ತಾನ ‘ಭಯೋತ್ಪಾದಕರ ಕೇಂದ್ರ’ ಎಂದು ವಾಗ್ದಾಳಿ ನಡೆಸಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಗಳಲ್ಲಿ ಆರು ನಾಗರಿಕರನ್ನು ಭಯೋತ್ಪಾದ ಕರು ಹತ್ಯೆ ಮಾಡಿದ್ದಾರೆ. ಉಗ್ರರ ಮೂಲಕ ಈ ರೀತಿ ಕೃತ್ಯ ನಡೆಸುವ ಪಾಕಿಸ್ತಾನದ ಕ್ರಮ ಹೇಡಿತನದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಯೆನ್ನಾದಲ್ಲಿ ಮಾತನಾಡಿದ ಅವರು – ಪಾಕಿಸ್ತಾನವನ್ನು ಹೆಸರಿಸದೆ – ಭಾರತಕ್ಕೆ ಭಯೋತ್ಪಾದಕರನ್ನು ದಾಳಿಗೆ ಬಿಡುವ ಪಾಕಿಸ್ತಾನಕ್ಕೆ ನಾಚಿಕೆ ಆಗಬೇಕು ಎಂದು ಆರೋಪಿಸಿದ್ದಾರೆ.ಗಡಿಯಾಚೆ ಭಯೋತ್ಪಾದನಾ ದಾಳಿ ನಿಲ್ಲಿಸುವಂತೆ ಪಾಲಿಸ್ತಾನಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ತಲೆ ಕೆಡಿಸಿಕೊಳ್ಳುತ್ತಿಲ್ಲ.ಬದಲಾಗಿ ತನ್ನ ಕೆಲಸವನ್ನು ಮುಂದುವರಿಸಿ ಕೊಂಡು ಭಾರತದ ಮೇಲೆ ಭಯೋತ್ಪಾದಕರ ಮೇಲೆ ನಕಲಿಯುದ್ದ ಘೋಷಿಸಿದೆ ಎಂದು ದೂರಿದ್ದಾರೆ.ಭಾರತದ ಮೇಲೆ ದಾಳಿ ಮಾಡಿದಾಗಲೆಲ್ಲ ಪಾಕಿಸ್ತಾನ ತಕ್ಕ ಉತ್ತರ ಪಡೆದಿದೆ. ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ಅಮಾಯಕ ನಾಗರಿಕರನ್ನು ಹತ್ಯೆ ಮಾಡುವ ಕೃತ್ಯವನ್ನು ನಿಲ್ಲಿಸಿದ್ದರೆ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಗಂಭೀರ ಪರಿಣಾಮ ಎದುರಿಸಬೇಕಾಗುತ್ತಿದೆ. ಹೀಗಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕಿವಿ ಮಾತು ಹೇಳಿದ್ದಾರೆ.
ಭಯೋತ್ಪಾದಕರು ಮೇಲಿಂದ ಮೇಲೆ ಭಾರತ ಮೇಲೇ ದಾಳಿ ಮಾಡುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಇರುವುದಿಲ್ಲ. ಇದಕ್ಕಾಗಿ ಭಯೋತ್ಪಾದಕರು ಮತ್ತು ಪಾಕಿಸ್ತಾನ ತಕ್ಕ ಪ್ರತ್ಯುತ್ತರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.