ಪಾಕ್‌ಗೆ ಹೆಚ್ಚುವರಿ ಭದ್ರತೆ ನೀಡಲು ಸಾಧ್ಯವಿಲ್ಲ

ನವದೆಹಲಿ,ಆ.೧೨- ದೇಶದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಕ್ರಿಕೆಟ್ ತಂಡದಂತೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪರಿಗಣಿಸಲಾಗುವುದು. ಅದನ್ನು ಬಿಟ್ಟು ಪಾಕಿಸ್ತಾನಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಅಕ್ಟೋಬರ್ ೧೦ ರಂದು ಪಾಕಿಸ್ತಾನ ತಂಡ ಬೆಂಗಳೂರಿನಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಇದಕ್ಕಾಗಿ ಹೆಚ್ಚಿನ ಭದ್ರತೆ ಬಂಚಿiಸಿರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ವಿಷಯ ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಸರ್ಕಾರ ತಮ್ಮ ತಂಡಕ್ಕೆ ಉತ್ತಮ ಭದ್ರತೆ ಬಯಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಇಲಾಖೆ ಎಲ್ಲ ತಂಡಕ್ಕೂ ಭದ್ರತೆ ಒದಗಿಸಲಾಗುವುದು. ಆದರೆ ವಿಶೇಷ ಅಥವಾ ಹೆಚ್ಚುವರಿ ಭದ್ರತೆ ಒದಗಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಭಾರತದಲ್ಲಿ ೨೦೧೬ ರಲ್ಲಿ ಟಿ-೨೦ ವಿಶ್ವಕಪ್‌ನಲ್ಲಿ ಆಡಿದ್ದ ಪಾಕಿಸ್ತಾನ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಆಡಲು ಸಜ್ಜಾಗಿದೆ. ಬಾಬರ್ ಅಜಮ್ ನೇತೃತ್ವದ ತಂಡ ಕಳೆದ ವಾರವಷ್ಟೇ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ಅಂತಿಮ ದೃಢೀಕರಣ ಸ್ವೀಕರಿಸಿದೆ.
ಅಕ್ಟೋಬರ್ ೬ ರಂದು ನೆದರ್‌ಲ್ಯಾಂಡ್ ವಿರುದ್ಧ ತಮ್ಮ ವಿಶ್ವಕಪ್ ಕ್ರಿಕೆಟ್ ಅಭಿಯಾನ ಪ್ರಾರಂಭಿಸಲಿದ್ದಾರೆ ಮತ್ತು ಅಕ್ಟೋಬರ್ ೧೪ ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದ್ದಾರೆ.

ಪಾಕಿಸ್ತಾನದ ವೇಳಾಪಟ್ಟಿ:
ಅಕ್ಟೋಬರ್ ೬ – ಪಾಕಿಸ್ತಾನ- ನೆದರ್‌ಲ್ಯಾಂಡ್, ಹೈದರಾಬಾದ್, ೨ ಗಂಟೆ
ಅ.೧೦ – ಪಾಕಿಸ್ತಾನ- ಶ್ರೀಲಂಕಾ, ಹೈದರಾಬಾದ್, ೨ ಗಂಟೆ
ಅ.೧೦ ಪಾಕಿಸ್ತಾನ -ಭಾರತ, ಅಹಮದಾಬಾದ್, ಮಧ್ಯಾಹ್ನ ೨ ಗಂಟೆ
ಅ.೨೦, ಪಾಕಿಸ್ತಾನ -ಆಸ್ಟ್ರೇಲಿಯಾ, ಬೆಂಗಳೂರು, ಮಧ್ಯಾಹ್ನ ೨ ಗಂಟೆ
ಅ. ೨೩ – ಪಾಕಿಸ್ತಾನ – ಅಫ್ಘಾನಿಸ್ತಾನ, ಚೆನ್ನೈ, ಮಧ್ಯಾಹ್ನ ೨ ಗಂಟೆ
ಅ. ೨೭ – ಪಾಕಿಸ್ತಾನ- ದಕ್ಷಿಣ ಆಫ್ರಿಕಾ, ಚೆನ್ನೈ, ಮಧ್ಯಾಹ್ನ ೨ ಗಂಟೆ
ಅ. ೩೧ – ಪಾಕಿಸ್ತಾನ -ಬಾಂಗ್ಲಾದೇಶ, ಕೋಲ್ಕತ್ತಾ, ಮಧ್ಯಾಹ್ನ ೨ ಗಂಟೆಗೆ
ನ. ೪ – ಪಾಕಿಸ್ತಾನ- ನ್ಯೂಜಿಲೆಂಡ್, ಬೆಂಗಳೂರು, ಬೆಳಗ್ಗೆ ೧೦:೩೦ಕ್ಕೆ
ನ. ೧೧ – ಪಾಕಿಸ್ತಾನ- ಇಂಗ್ಲೆಂಡ್, ಕೋಲ್ಕತ್ತಾ, ಮಧ್ಯಾಹ್ನ ೨ಕ್ಕೆ