ಪಾಕಿಸ್ತಾನ ಪರ ಘೋಷಣೆ ಬಂಧಿಸುವಂತೆ ಆಗ್ರಹ

ವಿಜಯಪುರ:ಮೇ.15: ಬೆಳಗಾವಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿ ಕಾಂಗೇಸ್ ಕಾರ್ಯಕರ್ತರನ್ನು ಶೀಘ್ರದಲ್ಲಿ ಬಂಧಿಸಿ ಶಿಕ್ಷಿಗೆ ಒಳಪಡಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಭಾರತಿಯ ಜನತಾ ಪಾರ್ಟಿ ಯುವ ಮೋರ್ಚಾ ವಿಜಯಪುರ ಜಿಲ್ಲೆಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ 2023 ವಿಧಾನಸಭೆಯ ಚುನಾವಣೆಯ ಫಲಿತಾಂಶಬಂದನಂತರ ಬೆಳಗಾವಿಯಲ್ಲಿವಿಜಯೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್‍ನ ಕೆಲ ಕಾರ್ಯಕರ್ತರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ಧಿ ಪ್ರಚಾರವಾಗುತ್ತಿದ್ದು, ಇಂತಹ ದೇಶದ್ರೋಹಿಗಳಿಗೆ ಮೇಲೆ ಕ್ರಮ ಜರುಗಿಸಬೇಕು. ಒಂದು ವೇಳೆ ತಾವುಗಳು ಕ್ರಮಜರುಗಿಸದಿದ್ದರೆ ಇಂಥವರ ಸಂಖ್ಯೆ ರಾಷ್ಟ್ರದಲ್ಲಿ ಇನ್ನಷ್ಟು ಹೆಚ್ಚಾಗುತ್ತದೆ ಇವರು ರಾಷ್ಟ್ರಕ್ಕೆ ದೊಡ್ಡ ಮಾರಕವಾಗಿ ಹೊರ ಹೊಮ್ಮುತ್ತಾರೆ ಇಂತಹ ದುಷ್ಟಶಕ್ತಿಯಹಿಂದೆ ಯಾವ ದೇಶದ್ರೋಹಿಗಳ ಕೈವಾಡವಿದೆ ಆ ಪಕ್ಷದನಾಯಕರೇ ಆಗಿರಲಿ ಆ ಪಕ್ಷವೇ ಆಗಿರಲಿ ಸೂಕ್ತ ತನಿಖೆ ಮಾಡಿ ಇಂತಹ ರಾಷ್ಟ್ರ ದ್ರೋಹಿಗಳ ಎಡೆಮುರಿ ಕಟ್ಟಬೇಕು ಎಂದು ಒತ್ತಾಯಿಸಿದರು. ಅವರಮೇಲೆ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
ಈ ಸಂದರ್ಭದಲ್ಲಿ ಶ್ರಿಕಾಂತ ಶಿಂಧೆ, ಶ್ರೀಧರ ಬಿಜ್ಜರಗಿ, ರವಿ ಬಿರಾದಾರ, ಪ್ರವೀಣ ಕೂಡಗಿ, ಶಿವರಾಜ ತಳವಾರ ಮುಂತಾದವರು ಇದ್ದರು.