ಪಾಕಿಸ್ತಾನ ಪರ ಘೋಷಣೆಬಿಜೆಪಿ ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಫೆ.28: ವಿಧಾನಸೌದದಲ್ಲಿ ನಿನ್ನೆ ಸಂಜೆ  ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರ ಬೆಂಬಲಿಗರು     ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ನಗರದಲ್ಲಿಂದು ಬಿಜೆಪಿ.ನಾಸೀರ್ ಹುಸೇನ್ ವಿರುದ್ಧ ಪ್ರತಿಭಟನೆ ನಡೆಸಿ ತನ್ನ  ರೋಷಾವೇಷ ಪ್ರದರ್ಶನ ಮಾಡಿತು.ನಗರದ ಗವಿಯಪ್ಪ ವೃತ್ತದಲ್ಲಿ ಸೇರಿದ ಮುಖಂಡರು ಮತ್ತು ಕಾರ್ಯಕರ್ತರು. ಮಾನವ ಸರಪಳಿ‌ ನಾಸೀರ್ ಮತ್ತು ಕಾಂಗ್ರೆಸ್ ವಿರುದ್ದ ಘೋಷಣೆ ಕೂಗಿದರು.ನಂತರ ಬುಡಾ ಕಚೇರಿ ಆವರಣದಲ್ಲಿರುವ  ನಾಸೀರ್ ಹುಸೇನ್ ಅವರ  ಕಚೇರಿವರೆಗೆ ತೆರಳಿ ಮುತ್ತಿಗೆ ಹಾಕಲು ಯತ್ನ ನಡೆಯಿತು.  ಕಚೇರಿ ಮುಂಭಾಗದಲ್ಲಿ  ಪೊಲೀಸರು ತಡೆದರು.  ಆಗ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ ಘೋಷಣೆ  ಕೂಗಿದರು. ಕಚೇರಿಯೊಳಗೆ ನುಗ್ಗುಲು ಯತ್ನಿಸಿದರು. ಕಚೇರಿ ಮುಂದೆ ಇರೋ ಬೋರ್ಡ್ ಗೆ ಕಟ್ಟಿಗೆಯಿಂದ ಹೊಡೆದು ಕಿತ್ತಲುಮುಂದಾದಾಗ ತಡೆದ ಪೊಲೀಸರು    ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದನಡೆಯಿತು.‌ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‌ ಇಲ್ಲಾಂದ್ರೇ ವಜಾಗೊಳಿಸುವಂತೆ ಆಗ್ರಹಿಸಿದರು.  ನಾಸೀರ್ ಹುಸೇನ್  ದೇಶ ವಿರೋಧಿ ಎಂದರು.