ಪಾಕಿಸ್ತಾನಕ್ಕೆ ಅಮೆರಿಕ ೩,೫೦೦ ಕೋಟಿ ಸೇನಾ ನೆರವು

ವಾಷಿಂಗ್ಟನ್,ಸೆ೯: ಭವಿಷ್ಯದ ಭಯೋತ್ಪಾದನಾ ಬೆದರಿಕೆಗಳನ್ನು ನಿಯಂತ್ರಿಸಲು ಎಫ್-೧೬ ಫೈಟರ್ ಜೆಟ್ (ಈ-೧೬ ಜಿighಣeಡಿ ಎeಣ) ಪಡೆಯ ಸುಸ್ಥಿರ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನಕ್ಕೆ ೩,೫೦೦ ಕೋಟಿ (೪೫೦ ಮಿಲಿಯನ್ ಡಾಲರ್) ಮೊತ್ತದ ಸೇನಾ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.
೧೮ರಲ್ಲಿ ತಾಲಿಬಾನ್ (ಖಿಚಿಟibಚಿಟಿ) ಮತ್ತು ಹಕ್ಕಾನಿ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ವಿಫಲವಾದ ಪಾಕಿಸ್ತಾನಕ್ಕೆ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ೧೫,೦೦೦ ಕೋಟಿ ನೆರವನ್ನು ತಡೆಹಿಡಿದಿದ್ದರು. ಅದಾದ ಬಳಿಕ ಪಾಕ್‌ಗೆ ಅಮೆರಿಕ ನೀಡುತ್ತಿರುವ ಮೊದಲ ನೆರವು ಇದಾಗಿದೆ. ಇದು ಪಾಕಿಸ್ತಾನ ಅಮೆರಿಕ ದ್ವಿಪಕ್ಷಿಯ ಸಂಬಂಧದ ಭಾಗವಾಗಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಎಫ್-೧೬ ಸಹಾಯಕವಾಗಲಿದೆ. ಈ ನೆರವಿನ ಅಡಿಯಲ್ಲಿ ಯಾವುದೇ ಸಾಮರ್ಥ್ಯದ ಶಸ್ತ್ರಾಸ್ತ್ರ ಯುದ್ಧ ಸಾಮಗ್ರಿಗಳನ್ನು ಒಳಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-೨ ಇನ್ನಿಲ್ಲ
೨೦೧೯ರಲ್ಲಿ ಬಾಲಾಕೋಟ್ ದಾಳಿಯ ನಂತರ ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನ ಇದೇ ವಿಮಾನವನ್ನು ಬಳಲು ಮುಂದಾಗಿತ್ತು. ಜೊತೆಗೆ ಅಂದಿನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮಿಗ್-೨೧ ಅನ್ನು ಹೊಡೆದುರುಳಿಸಲು ಪಾಕಿಸ್ತಾನ ಬಳಸಿತ್ತು. ಅಮೆರಿಕ ಪಾಕಿಸ್ತಾನಕ್ಕೆ ಈ ಕ್ಷಿಪಣಿಯನ್ನು ಉಗ್ರರ ವಿರುದ್ಧ ಬಳಸಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಈ ಷರತ್ತು ಉಲ್ಲಂಘಿಸಿ ಭಾರತದ ವಿರುದ್ಧ ಪ್ರಯೋಗಿಸಿತ್ತು.
ಸದ್ಯ ಪಾಕಿಸ್ತಾನ ವಾಯುಪಡೆಯು ಎಫ್-೧೬ ಫೈಟರ್ ಜೆಟ್ ಹಾಗೂ ಸೇನಾ ಬೆಂಬಲ ಕೋರಿದ ನಂತರ ಯುಎಸ್ ಕಾಂಗ್ರೆಸ್ ಸಂಭವನೀಯ ಮಾರಾಟದ ಕುರಿತು ಬುಧವಾರ ಮಾತುಕತೆ ನಡೆಸಿದೆ. ಇದರಿಂದಾಗಿ ವಿಮಾನ, ಇಂಜಿನ್, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ನ ಮಾರ್ಪಾಡುಗಳ ಬೆಂಬಲವನ್ನೂ ಪಾಕಿಸ್ತಾನ ಒಳಗೊಂಡಿರಲಿದೆ. ಜೊತೆಗೆ ಜೆಟ್‌ಗಳು ಹಾಗೂ ಅದರ ಇಂಜಿನ್ ಬಿಡಿ ಭಾಗಗಳ ದುರಸ್ತಿ ಮತ್ತು ವಾಪಾಸಾತಿ, ವರ್ಗೀಕರಿಸದ ತಂತ್ರಾಂಶಗಳ ಬೆಂಬಲವನ್ನೂ ಪಾಕ್ ಒಳಗೊಂಡಿರಲಿದೆ.
ಪಾಕಿಸ್ತಾನವು ೧೯೮೦ ರಿಂದ ಎಫ್-೧೬ ಜೆಟ್‌ಗಳನ್ನು ಮಾರಾಟ ಮಾಡುವ ಹಾಗೂ ನವೀಕರಿಸಿದ ನೀತಿಯ ಅಡಿಯಲ್ಲಿ ಯುಎಸ್ ಮಿಲಿಟರಿಯ ಸಹಾಯದ ಭಾಗವಾಗಿದೆ. ೧೯೮೧ರಲ್ಲಿ ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಆಕ್ರಮಣದ ನಂತರ ಎಫ್ -೧೬ ಜೆಟ್‌ಗಳನ್ನು ಯುಎಸ್ ಪಾಕಿಸ್ತಾನಕ್ಕೆ ಮಾರಾಟ ಮಾಡಲು ಒಪ್ಪಿಕೊಂಡಿತು. ಇದನ್ನೂ ಓದಿ: ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ ಟ್ರಂಪ್ ಬಣ್ಣನೆ
ವರದಿಗಳ ಪ್ರಕಾರ ೧೯೮೬ ೧೯೯೦ರ ನಡುವೆ ಪಾಕಿಸ್ತಾನದ ಎಫ್-೧೬ ಜೆಟ್‌ಗಳು ಕನಿಷ್ಠ ೧೦ ಅಫ್ಘಾನ್ ಮತ್ತು ಸೋವಿಯತ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು ಹಾಗೂ ವಿಮಾನಗಳನ್ನ ಹೊಡೆದುರುಳಿಸಿವೆ. ೧೯೯೦ರ ದಶಕದಲ್ಲಿ ನಡೆದ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಬೆಳವಣಿಗೆಯಿಂದಾಗಿ ಅಮೆರಿಕ ಅಸಮಾಧಾನಗೊಂಡಿತು. ಬಳಿಕ ಅಮೆರಿಕ ಎಫ್-೧೬ ಜೆಟ್‌ಗಳ ವಿತರಣೆಯನ್ನು ತಡೆಹಿಡಿದಿತ್ತು.