ಪಾಂಡುರಂಗ ದೇವಸ್ಥಾನದಲ್ಲಿ ಆಷಾಡದ ಕೊನೆ ಏಕಾದಶಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.25:-ಸ್ಥಳಿಯ ಕೌಲ್ ಬಜಾರ್ ಟೈಲರ್ ಬೀದಿಯಲ್ಲಿ ರುವ ಪಾಂಡುರಂಗ ದೇವಾಲಯ ದಲ್ಲಿ ಆಷಾಡ ಮಾಸದ ಕೊನೆಏಕಾದಶಿ ಅಂಗವಾಗಿ ದೇವಾಲಯ ದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
 ಬೆಳಿಗ್ಗೆ ಪಾಂಡುರಂಗ ರುಕ್ಮಿಣಿ ಪ್ರತಿಮೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.  ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಪಾಂಡುರಂಗ ದೇವರಪಾದ ಸ್ಪರ್ಶ ಮಾಡುವುದರ‌ಮೂಲಕ ದರ್ಶನ ಪಡೆದರು.
 ಭಕ್ತರು ಜ್ಞಾನೇಶ್ವರ ಮಹಾರಾಜ ರು ರಚಿಸಿದ ಕೃತಿಗಳನ್ನು ಸಾಮೂಹಿಕ ವಾಗಿ ಪಾರಾಯಣ ಮಾಡಿದರು ನೂರಾರು ಮಹಿಳೆಯರು ಕಳಸದ ಆರತಿ ಬೆಳಗಿದರು.
ಇಡೀರಾತ್ರಿ  ಪಾಂಡುರಂಗ ದೇವರುಕುರಿತು ಹಲವಾರುಮರಾಠಿ ಅಭಂಗಗಳನ್ನು ಮಾಡುವುದರ ಮೂಲಕ ಜಾಗರಣೆ ಆಚರಣೆ ಮಾಡಿದರು ಕಾರ್ಯ ಕ್ರಮ ದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ಹಲವಾರು ಮುಖಂಡರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.