ಪಾಂಡವರ ಅಣಿಗೆ ಹೋಗಲು ದಾರಿ ಯಾವುದಯ್ಯ …?

ಕಲಬುರಗಿ,ಆ.11-ಇಲ್ಲಿಗೆ ಸಮೀಪದ ಸೈಯದ್ ಚಿಂಚೋಳಿ, ಜಂಬಗಾ, ಕುಮಸಿ, ಗಣಜಲಖೇಡ ಮತ್ತು ತಾಜ್ ಸುಲ್ತಾನಪೂರ ಗ್ರಾಮಗಳ ಸೀಮಾಂತರದಲ್ಲಿರುವ ಸುಕ್ಷೇತ್ರ ಪಾಂಡವರ ಅಣಿಗೆ ಹೋಗಲು ಸರಿಯಾದ ರಸ್ತೆ ಇಲ್ಲದಂತಾಗಿದೆ. ಇದರ ಇತಿಹಾಸ ಬಹಳ ದೊಡ್ಡದಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಈ ಅಣಿಯಲ್ಲಿ ಪಾಂಡವರು ವಾಸವಿದ್ದರು ಎಂಬ ಪ್ರತೀತಿ ಇದ್ದು, ಇದು ಪಾಂಡವರ ಅಣಿ ಎಂದು ಪ್ರಸಿದ್ಧಿ ಪಡೆದಿದೆ. ಆದರೆ ಸುಕ್ಷೇತ್ರಕ್ಕೆ ತೆರಳಲು ಸರಿಯಾದ ರಸ್ತೆ, ವಿದ್ಯುತ್ ಸರಬರಾಜು ವ್ಯವಸ್ಥೆ ಇಲ್ಲ. ಹಗಲು ಹೊತ್ತಿನಲ್ಲಿ ಈ ದೇವಸ್ಥಾನಕ್ಕೆ ಹೋಗಬೇಕಾದರೆ ಬಹಳ ಕಷ್ಟಪಡಬೇಕಾದ ಸ್ಥಿತಿ ಇದೆ. ರಾತ್ರಿ ಅಂತೂ ಆ ದೇವರೇ ಕಾಪಾಡಬೇಕೆಂದು ಭಕ್ತರು ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಪಾಂಡವರ ಅಣಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದುಕೊಂಡು ಇದಕ್ಕೆ ಪರಿಹಾರ ಒದಗಿಸಬೇಕೆಂದು ಭಕ್ತಾದಿಗಳು ವಿನಂತಿಸಿದ್ದಾರೆ.
ಈ ಕ್ಷೇತ್ರ ಕಲ್ಬುರ್ಗಿ ಸಮೀಪದ ಗ್ರಾಮಗಳಾದ ಸೈಯದ್ ಚಿಂಚೋಳಿ, ಜಂಬಗಾ, ಕುಮಸಿ, ಗಣಜಲಖೇಡ ಮತ್ತು ತಾಜ ಸುಲ್ತಾನಪೂರ ಹೀಗೆ ಹಲವಾರು ಸೀಮೆಗಳಿಗೆ ಹೊಂದಿಕೊಂಡಿರುವ ಈ ಪಾಂಡವರ ಅಣಿಯಲ್ಲಿ ಆದಿ ಮಾರುತಿ ಶ್ರೀ ಮಲ್ಲಿಕಾರ್ಜುನ್ ಹಾಗೂ ಜಗನ್ಮಾತೆ ಮಹಾಕಾಳಿ ದೇವಸ್ಥಾನ ಜಾಗೃತ ದೇವಸ್ಥಾನವಿದೆ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರು ಈ ಐದೂರು ಗ್ರಾಮದ ಪ್ರಮುಖರು ಈ ದೇವಸ್ಥಾನದ ಬಗ್ಗೆ ಕಾಳಜಿ ವಹಿಸಿ ಮುಖ್ಯರಸ್ತೆಯಲ್ಲಿ ಕಾಣುವ ಈ ಪಾಂಡವರಾಣಿ ಅಭಿವೃದ್ಧಿ ಪಡಿಸಬೇಕು ಎಂದು ಭಕ್ತಾಧಿಗಳು ಒತ್ತಾಯಿಸಿದ್ದಾರೆ.