ಪಶ್ಚಿಮ ಬಂಗಾಳ ವರದಿಗಾರನ ಬಂಧನ : ಖಂಡನೆ

ಲಿಂಗಸೂಗೂರು.ಫೆ.೨೪- ಪಶ್ಚಿಮ ಬಂಗಾಳದ ಸಂದೇಶ್ ಖಾಲಿಯಲ್ಲಿ ಖಾಸಗಿ ಸುದ್ಧಿ ವಾಹಿನಿಯ ವರದಿಗಾರ ಸಂತುಪನ್ ಮೇಲೆ ಹಲ್ಲೆ ಹಾಗೂ ಬಂಧನವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ತೀವ್ರವಾಗಿ ಖಂಡಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಹಿಂಸಾಚಾರ ಘಟನೆ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ದೌರ್ಜನ್ಯ ಎಸಗಿದ್ದಲ್ಲದೇ, ಬಂಧನ ಮಾಡಲಾಗಿದೆ. ದೇಶದಲ್ಲಿ ನಾಲ್ಕನೇ ಅಂಗವೆಂದು ಗುರುತಿಸಿಕೊಂಡಿರುವ ಪತ್ರಿಕಾರಂಗದ ಮೇಲೆ ಹಲ್ಲೆಯಂತ ಪ್ರಕರಣಗಳು ಪದೇ ಪದೆ ಮರುಕಳಿಸುತ್ತಿರುವುದು ವಿಷಾದಕರ. ನೊಂದು ಬೆಂದವರಿಗೆ ನ್ಯಾಯಕೊಡಿಸುವಂತಹ ಪತ್ರಿಕಾರಂಗಾ, ತನ್ನದೇಯಾದ ಸ್ಥಾನ ಹಾಗೂ ಸ್ವಾತಂತ್ರ?ಯವನ್ನು ಹೊಂದಿದೆ. ಆದರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಕರ್ತವ್ಯನಿರತ ಪತ್ರಕರ್ತನನ್ನು ಬಂಧನ ಮಾಡುವ ಮೂಲಕ ಮಾಧ್ಯಮ ಸ್ವಾತಂತ್ರ?ಯ ಹರಣಕ್ಕೆ ಮುಂದಾಗಿರುವುದು ಖಂಡನೀಯವಾಗಿದೆ.
ಕೂಡಲೇ ಬಂಧಿತ ಪತ್ರಕರ್ತನನ್ನು ಬಿಡುಗಡೆಗೊಳಿಸಬೇಕು ಹಾಗೂ ಅವರ ಮೇಲೆ ಹಾಕಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಸಂಘವು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ, ಹಿರಿಯ ಪತ್ರಕರ್ತರಾದ ಬಿ.ಎ. ನಂದಿಕೋಲಮಠ, ನಾಗರಾಜ ಮಸ್ಕಿ, ಶರಣಯ್ಯ ಒಡೆಯರ್, ಅಮರೇಶ ಕಲ್ಲೂರು, ಅಮ್ಜದ್ ಕಂದಗಲ್, ರವಿಕುಮಾರ ಕಬ್ಬೇರ್, ಬಲಭೀಮರಾವ್ ಕುಲಕರ್ಣಿ, ಹನುಮಂತ ನಾಯಕ, ದುರಗಪ್ಪ ಹೊಸಮನಿ, ಗಂಗಾಧರ ನಾಯಕ, ಹನುಮಂತ ಕನ್ನಾಳ, ಬಸವರಾಜ ಆಸಿಹಾಳ, ಅಮರೇಶ ಮೇದಾರ, ರವಿಕುಮಾರ್ ಹೊಸಮನಿ, ಬಸವರಾಜ ಹೂನೂರು, ಮಹ್ಮದ್ ಮುಸ್ತಾಪ್, ರಾಜೇಶ ಮಾಣಿಕ್, ಸುರೇಶ, ಬಸವರಾಜ ಹೂನೂರು, ಹುಸೇನ್ ಭಾಗವಾನ್ ಸೇರಿ ಇತರರು ಇದ್ದರು.