ಪಶ್ಚಿಮ ಬಂಗಾಳದಲ್ಲೂ ಉಚಿತ ಲಸಿಕೆ ವಿತರಣೆ

ಕೊಲ್ಕತ್ತಾ, ಜ.9- ಉಚಿತವಾಗಿ ಕೊರೊನಾ ಲಸಿಕೆ ವಿತರಿಸಸಲಾಗುವುದು‌ ಎಂದು ಹೇಳುವ ಮೂಲಕ ರಾಜ್ಯದ ಜನತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ.
ಕೇರಳ, ತಮಿಳುನಾಡು, ಬಿಹಾರದ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಚಿತ ಲಸಿಕೆ‌‌ ನೀಡುವುದಾಗಿ ಪ್ರಕಟಿಸಿವೆ. ಈಗ ಈ ರಾಜ್ಯಗಳ ಪಟ್ಟಿಗೆ ಪಶ್ಚಿಮ ಬಂಗಾಳ ರಾಜ್ಯವೂ ಸೇರ್ಪಡೆಯಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಚಿತ ಲಸಿಕೆ ವಿತರಣೆಗಾಗಿ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನರಿಂದ ಹಣ ಪಡೆಯದೆ ಉಚಿತವಾಗಿ ಲಸಿಕೆ ವಿತರಿಸುತ್ತಿದೆ ಎಂದು ಹೇಳಲು ತಮಗೆ ಸಂತಸವಾಗುತ್ತಿದೆ ಎಂದು ಹೇಳಿದರು.
ಕೊರೊನಾ ಸೋಂಕಿನ ಹೋರಾಟದಲ್ಲಿ ಮೋದಿಯವರ ಹೆಗ್ಗುರುತಿನ ಹೆಜ್ಜೆ ದೊಡ್ಡ ಮಟ್ಟದಲ್ಲಿ ಇದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.