ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿಗೆ ಅಪಮಾನ ಬಿಜೆಪಿ ಖಂಡನೆ

ಬಳ್ಳಾರಿ ಏ 17 : ಪಶ್ಚಿಮ ಬಂಗಾಳದ ಚುನಾವಣಾ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತ ಮಂಡಲ್ ಖಾನ್, ಪರಿಶಿಷ್ಟ ಜಾತಿಯವರ ಬಗ್ಗೆ ತುಂಬಾ ಅಪಮಾನಕರ ಹೇಳಿಕೆಯನ್ನು ನೀಡಿದ್ದಾರೆ.
‘ಮಮತ ಬ್ಯಾನರ್ಜಿಯವರು ಪರಿಶಿಷ್ಟ ಜಾತಿಯವರ ಅವಶ್ಯಕತೆಯನ್ನು ಪೂರೈಸಿದರೂ, ಅವರ ಬೇಡಿಕೆಗಳನ್ನು ಕಡಿಮೆ ಮಾಡಿಲ್ಲ ಹಾಗಾಗಿ ಕೆಲವರು ದಲಿತ ಪರಿಶಿಷ್ಟ ಜಾತಿಯವರು ನೈಜವಾಗಿ ಭಿಕ್ಷುಕರಾಗಿದ್ದಾರೆ. ಇನ್ನೂ ಕೆಲವರನ್ನು ಸಂದರ್ಭಗಳು ಭಿಕ್ಷುಕರನ್ನಾಗಿ ಮಾಡಿರುತ್ತದೆ. ಆದರೆ ಇಲ್ಲಿ ಪರಿಶಿಷ್ಟ ಜಾತಿಯವರು ನೈಜವಾಗಿಯೇ ಬೇಡುವ ಭಿಕ್ಷುಕರು” ಎಂಬ ಹೇಳಿಕೆಯನ್ನು ನೀಡುವ ಮೂಲಕ ಪರಿಶಿಷ್ಟ ಜಾತಿಯವರಾದ ನಮ್ಮ ಸ್ವಾಭೀಮಾನಕ್ಕೆ ಧಕ್ಕೆ ತರುವಂತೆ ಅವಮಾನಿಸಿದ್ದಾರೆ ಎಂದಿದ್ದಾರೆ.
ಭಾರತ ದೇಶಕ್ಕೆ ಸಂವಿಧಾನ ನೀಡಿದಂತಹ ಡಾ| ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮದಿನದಂದು ಸಂಭ್ರಮವಾಗಿ ಆಚರಿಸುವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಪಶ್ಚಿಮ ಬಂಗಾಳದ ನಾಯಕಿ ಸುಜಾತ ಮಂಡಲ್‌ಖಾನ್ .
ಅವರ ದೃಷ್ಟಿ ಮತ್ತು ಕೀಳರಿಮೆಯ ಮನಸ್ಥಿತಿಯನ್ನು ಖಂಡಿಸಿ ಕಾನೂನು ಕ್ರಮ ಜರುಗಿಸುವಂತೆ ರಾಜ್ಯಪಾಲರಿಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾದಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ‌ಪತ್ರ ಸಲ್ಲಿಸಿದೆ ಇಂದು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಬಿ.ಇ.ರಾಜೇಶ್, ಪ್ರಧಾನ ಕಾರ್ಯದರ್ಶಿ ಹುಲುಗಪ್ಪ, ಕೇದಾರ್‌ನಾಥ್, ಉಪಾಧ್ಯಕ್ಷರಾದ ಷಣ್ಮುಖ, ಹನುಮಂತ, ಗಜೇಂದ್ರ, ರಾಮಾಂಜನಿ ಹಾಗೂ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು,