ಪಶು ವೈದ್ಯರ ಕೊರತೆ ನೀಗಿಸಲು ಕ್ರಮ : ಸಚಿವ ನಿರಾಣಿ

ಬಾಗಲಕೋಟೆ, ಮಾ 14 : ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು, ಜಾನುವಾರುಗಳ ಚಿಕಿತ್ಸೆಗೆ ಕೊರತೆಯಾಗದಂತೆ ಕ್ರಮವಹಿಸಲಾಗುವುದೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರು.
ಬೀಳಗಿ ತಾಲೂಕಿನ ಗಿರಿಸಾರ ಗ್ರಾಮದ ನೀಲಕಂಠೇಶ್ವರ ರಂಗಮಂದಿರದಲ್ಲಿ ಹಮ್ಮಿಕೊಂಡ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ, ಜನ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿದ ಅವರು ರಾಜ್ಯದಲ್ಲಿಯೇ ಪಶು ವೈದ್ಯರ ಕೊರತೆ ಇದ್ದು, ಎರಡು ಆಸ್ಪತ್ರಗೆ ಒಬ್ಬ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಮುಂಬರು ದಿನಗಳಲ್ಲಿ ಈ ಕೊರತೆಯನ್ನು ನಿವಾರಿಸಲಾಗುವುದು. ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಔಷಧಿಗಳ ಕೊರತೆ ಇರುವದಿಲ್ಲ. ಚಿಕಿತ್ಸೆಗೆ ತೊಂದರೆಯಾಗದ ಹಾಗೆ ಕ್ರಮವಹಿಸಲಾಗುವುದೆಂದು ತಿಳಿಸಿದಿರು.
ಗಿರಿಸಾಗರದಲ್ಲಿ ಸರಕಾರಿ ಬಾಲಕಿಯ ಶಾಲೆ ಪ್ರಾರಂಭಕ್ಕೆ ಕ್ರಮವಹಿಸಲಾಗುವುದು. ವಸತಿ ನಿಲಯ, ಪಿಯು ಕಾಲೇಜ, ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಸ್ಥಾಪನೆ, ಶಿಕ್ಷಕರ ಕೊರತೆ, ಗಟಾರ ವ್ಯವಸ್ಥೆ, ಶಾಲೆಗೆ ಕ್ರೀಡಾ ಸಲಕರಣೆಗಳ ವ್ಯವಸ್ಥೆಯ ಕಲ್ಪಿಸುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟರು. ಗ್ರಾಸ್ಥರ ಬೇಡಿಕೆಯನ್ನು ಆಲಿಸಿದರು. ಗ್ರಾಮದಲ್ಲಿ 110 ಕೆವಿ ವಿದ್ಯುತ್ ಸ್ಟೇಷನ್ ಸ್ಥಾಪಿಸಲು ಟೆಂಡರ್ ಆಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ವಿದ್ಯುತ್ ಅಭಾವ ನೀಗಲಿದೆ ಎಂದು ತಿಳಿಸಿದರು.
ಶಾಲಾ ಕೊಠಡಿಗಳು ಶೀಥಿಲಾವಸ್ಥೆಗೊಂಡಿದ್ದು, ಈಗಾಗಲೇ ಎರಡು ಕೊಠಡಿ ನಿಮಾಣಕ್ಕೆ ಮಂಜೂರಾತಿ ದೊರೆತಿದ್ದು, ಇನ್ನು ಒಂದು ಕೊಠಡಿ ಮಂಜೂರಿಗೆ ಕ್ರಮವಹಿಸಲಾಗುವುದು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒಟ್ಟು ನೀಡಲಾಗುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಮತಕ್ಷೇತ್ರದಲ್ಲಿ ಆದ್ಯತೆ ನೀಡಲಾಗುತ್ತಿದೆ. ಗ್ರಾಮದ ಮಕ್ಕಳಿಗೆ ಶಿಕ್ಷಣವಂತರಾಗಿ ಉನ್ನತ ಹುದ್ದೆ ಪಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಿರ್ಜಿ, ಎಪಿಎಂಸಿ ನಿರ್ದೇಶಕ ರಾಮಣ್ಣ ಕಾಳಪ್ಪಗೋಳ, ಮುಖಂಡರಾದ ಈರಣ್ಣ ಗಿಡ್ಡಪ್ಪಗೋಳ, ಎಂ.ಎಂ.ಶಂಬೋಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.