ಪಶು ವೈದ್ಯಕೀಯ ಸಚಿವ ಚವ್ಹಾಣರಿಗೆ ಆಸ್ಪತ್ರೆ ಕಟ್ಟಡಕ್ಕೆ ಬಯ್ಯಾಪೂರ ಪತ್ರ

ಲಿಂಗಸೂಗೂರು,ಜು.೧೭-ತಾಲೂಕಿನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಕೀಯ ಸೇವಾ ಇಲಾಖೆ ಸಚಿವ ಪ್ರಬುಚವ್ಹಾಣವರಿಗೆ ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರವರು ಪಶು ಆಸ್ಪತ್ರೆ ಸಿಬ್ಬಂದಿ ಕಟ್ಟಡಗಳಿಗಾಗಿ ಕೂಡಲೆ ಅನುದಾನ ಬೀಡುಗಡೆಗೆ ಒತ್ತಾಯಿಸಿ ಪತ್ರ ನೀಡಿರುವರು.
ರಾಯಚೂರ ಜಿಲ್ಲೆಯಲ್ಲಿ ದೊಡ್ಡ ತಾಲೂಕು ಕೇಂದ್ರವಾದ ಲಿಂಗಸೂ ಗೂರಿನಲ್ಲಿ ಜಾನುವಾರಸಾಗಣಿಕೆ ಕುರಿಸಾಗಣಿಕೆ ಮೇಕೆ ಸಾಗಣಿಕೆ ಮಾಡುವ ರೈತರು ಹೆಚ್ಚಿನ ಸಂಖ್ಯೆ ಯಲ್ಲಿರವದರಿಂದ ಪಶುಸಂಗೋಪನಾ ಇಲಾಖೆಯಿಂದ ಸೇವೆ ಒದಗಿಸಲು ಆಗುತ್ತಿಲ್ಲಾ ಕಾರಣ ಸೌಲಭ್ಯಗಳ ಅತಿ ಅವಶ್ಯವಾಗಿದ್ದು, ಇವುಗಳನ್ನು ಬೇಗ ಒದಗಿಸಲು ಒತ್ತಾಯಿಸಿದರು.
ಲಿಂಗಸೂಗೂರು ತಾಲೂಕು ಕೇಂದ್ರದಲ್ಲಿ ಸುಜ್ಜಿತ ಪಶುವೈದ್ಯಕೀಯ ವೈಜ್ಞಾನಿಕ ಪೀಠೋಪಕರಣ ಹೊಸ ಆಸ್ಪತ್ರೆ ಕಟ್ಟಡ ಅಭಿವೃದ್ಧಿಗೆ ಅಂದಾಜು ೧ಕೋಟಿ ರೂ.ವೆಚ್ಚ, ರೈತರಿಗೆ ಅನು ಕೂಲಕರವಾಗುವಂತೆ ತಾಲೂಕಿನಲ್ಲಿ ಪಶುವೈದ್ಯ ತರಬೇತಿ ಕೇಂದ್ರ ೬೦ ಲಕ್ಷ ರೂ. ಔಷಧ ಸಂಗ್ರಹಣೆಗೆ ಸುಜ್ಜಿತ ಕಟ್ಟಡ ಅಂದಾಜು ವೆಚ್ಚ ೨೫ ಲಕ್ಷ ರೂ. ಸಿಬ್ಬಂದಿಗಳ ವಸತಿ ಕಟ್ಟಡ ಅಭಿವೃದ್ಧಿಗೆ ೧ ಕೋಟಿ ರೂ.ಮುದಗಲ್ ಕಂದಾಯ ವ್ಯಾಪ್ತಿಯಲ್ಲಿ ಬರುವ ಪಶುವೈದ್ಯ ಕೀಯ ಸುಸಜ್ಜಿತ ಕಟ್ಟಡ ನಿರ್ಮಾಣ ಅಭಿವೃದ್ಧಿಗೆ ೬೦ ಲಕ್ಷರೂ. ಅನುದಾನ ಕ್ಕೆ ಪ್ರಸ್ತಾವನೆ ನೀಡಲಾಗಿದೆ.
ಲಿಂಗಸೂಗೂರು ತಾಲೂಕಿನಲ್ಲಿ ಪಶುವೈದ್ಯ ಇಲಾಖೆಯಲ್ಲಿಡಿ. ದರ್ಜೆ ನೌಕರರರಿಂದ ಹಿಡಿದು ಅಧಿಕಾರಿ ಗಳವರೆಗೆ ಒಟ್ಟು ಸುಮಾರ ೭೦ ಹುದ್ದೆ ಖಾಲಿ ಇದ್ದು ಇದರಿಂದ ದೈನಂದಿನ ವೈದ್ಯಕೀಯ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗಿದ್ದು, ಕಾರಣ ಅಧಿಕಾರಿಗಳ ಸಿಬ್ಬಂದಿಗಳ ವರ್ಗಾವಣೆ ಮತ್ತು ಡಿ ದರ್ಜೆ ನೇಮಕಾತಿ ನಿಯೋಜನೆ ಮೂಲಕ ಭರ್ತೀ ಮಾಡಲು ಶರಣಗೌಡ ಪಾಟೀಲ್ ಬಯ್ಯಾಪೂರ ವಿನಂತಿಸಿದ್ದಾರೆ.