ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಭೋಜನಾಲಯ ಸೋರುತ್ತಿರುವ ಕುರಿತು ಅಧಿವೇಶನದಲ್ಲಿ ಚರ್ಚೆ

ಬೀದರ್ :ಜು.11:ದಕ್ಷಿಣ ಕ್ಷೇತ್ರದಲ್ಲಿರುವ ಕರ್ನಾಟಕದ ಏಕೈಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಬೋಜನಾಲಯ ಸೋರುತ್ತಿದೆ ಈ ಸಮಸ್ಯೆ ಕುರಿತು ವಿಶ್ವವಿದ್ಯಾಲಯದ ಡೀನ್ ಅವರಿಗೆ ಕೇಳಿದರೆ ಅನುದಾನದ ಕೊರೆತೆಯಿದೆ ಎಂದು ಉತ್ತರ ನೀಡುತ್ತಾರೆ ಈ ಸಮಸ್ಯೆ ಕುರಿತು ಸಚಿವರು ಉತ್ತರಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಸಭಾಧ್ಯಕ್ಷರ ಮುಖಾಂತರ ಪಶು ಸಂಗೋಪನಾ ಸಚಿವರಾದ ಕೆ ವೆಂಕಟೇಶ ಅವರಿಗೆ ಪ್ರಶ್ನಿಸಿದರು.

ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣಾ ಗ್ರಾಮದ ಹೊರವಲಯದಲ್ಲಿರುವ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿನ ಭೋಜನಾಲಯ ಸೋರುತ್ತಿರುವ ಸುದ್ದಿ ಸುದ್ದಿಮೂಲ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನಲೆಯಲ್ಲಿ ಇಂದು ಬಿದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಇಂದು ವಿಧಾನಸಭೆ ಅಧಿವೇಶನದಲ್ಲಿ ಪಶು ಇಲಾಖೆ ಕುರಿತು ನಡೆಯುತ್ತಿರುವ ಪ್ರಶ್ನೋತ್ತರ ಚರ್ಚೆ ವೇಳೆ ಸಚಿವರಿಗೆ ಪ್ರಶ್ನಿಸಿದರು.

ಅಧಿಕಾರಿಗಳು ಈ ಸಮಸ್ಯೆ ಕುರಿತು ಪರಿಶೀಲನೆ ನಡೆಸುತ್ತಿಲ್ಲ ಇಡೀ ಕರ್ನಾಟಕದಲ್ಲೆ ಏಕೈಕ ವಿಶ್ವವಿದ್ಯಾಲಯ ನನ್ನ ಕ್ಷೇತ್ರವಾದ ಬೀದರ್ ದಕ್ಷಿಣ ಕ್ಷೇತ್ರದಲ್ಲಿದೆ ಅಲ್ಲಿ ಸುಮಾರ ನಮ್ಮ ಜಿಲ್ಲೆ ಸೇರಿ ವಿವಿಧ ಜಿಲ್ಲೆಯ 300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಾರೆ ಅದರಲ್ಲಿ 250 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ವಾಸವಾಗಿದ್ದಾರೆ. ವಾಸವಾಗಿದ್ದ ವಿದ್ಯಾರ್ಥಿಗಳ ಭೋಜನಾಲಯ ಅಲ್ಪಸ್ವಲ್ಪ ಮಳೆಗೆ ಸೋರುತ್ತಿದೆ ಅಲ್ಲಿನ ಪರಿಸ್ಥಿತಿ ಬಹಳ ಗಂಭೀರವಾಗಿದೆ ಸಚಿವರು ಈ ಕುರಿತು ಉತ್ತರ ನೀಡಬೇಕು ಎಂದು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಪಶು ಸಂಗೋಪನಾ ಸಚಿವರಾದ ಕೆ ವೆಂಕಟೇಶ ಅವರಿಗೆ ಪ್ರಶ್ನಿಸಿದರು ಈ ಸಮಸ್ಯೆ ಕುರಿತು ಮಾಹಿತಿ ಪಡೆದು ಉತ್ತರಿಸುವದಾಗಿ ಸಚಿವರು ಅಧಿವೇಶನದಲ್ಲಿ ತಿಳಿಸಿದರು.