
ಬೀದರ್:ಎ.2: ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಜಾನಿಗಳ ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ವಿಶ್ವವಿದ್ಯಾಲಯದಲ್ಲಿ ಎರಡೂ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವ ಪರಿಣಾಮವಾಗಿ ವ್ಯವಸ್ಥೆ ಹಳ್ಳಹಿಡಿಯುತ್ತಿದೆ.
ಬೀದರ್: ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಜಾನಿಗಳ ವಿಶ್ವವಿದ್ಯಾಲಯಕ್ಕೆ (Veterinary and Fisheries Sciences University) ಸಿಬ್ಬಂದಿಯ ಕೊರತೆ ಕಾಡುತ್ತಿದೆ.
ವಿಶ್ವವಿದ್ಯಾಲಯದಲ್ಲಿ ಎರಡೂ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವ ಪರಿಣಾಮವಾಗಿ ವ್ಯವಸ್ಥೆ ಹಳ್ಳಹಿಡಿಯುತ್ತಿದೆ. ದೇಶದಲ್ಲಿಯೇ ಅತ್ಯುತ್ತಮ 5 ಸ್ಟಾರ್ ಗ್ರೇಡ್ ಹೊಂದಿರು ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿಗಳೇ ಇಲ್ಲದಿರುವುದು ಸಾರ್ವಜನಿಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಗಡಿ ಜಿಲ್ಲೆ ಬೀದರ್ನಲ್ಲಿರುವ ರಾಜ್ಯದ ಏಕೈಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಜಾನಿಗಳ ವಿಶ್ವವಿದ್ಯಾಲಯಕ್ಕೆ ಈಗ ಅನಾಥ ಪ್ರಜ್ಞೆ ಕಾಡತೊಡಗಿದೆ. ಈ ವಿಶ್ವವಿದ್ಯಾಲಯ ಆರಂಭವಾದಾಗಿನಿಂದಲೂ ವಿವಿಧ ಹುದ್ದೆಗಳನ್ನ ಭರ್ತಿಮಾಡಿಲ್ಲ. ಹೀಗಾಗಿ ವಿಶ್ವವಿದ್ಯಾಲಯದಲ್ಲಿ ಸುಮಾರು 2104 ಹುದ್ದೆಗಳು ಖಾಲಿಯಿದ್ದು ಇಲ್ಲಿನ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಐದು ಕಡೆಗಳಲ್ಲಿ ಪಶುವೈದ್ಯಕೀಯ ಕಾಲೇಜುಗಳಿವೆ. ಅಥಣಿ ಮತ್ತು ಪುತ್ತೂರಗಳಲ್ಲಿ ಈಗ ಹೊಸದಾಗಿ ಪಶು ವೈದ್ಯಕೀಯ ಕಾಲೇಜುಗಳು ಆರಂಭವಾಗಿವೆ.
ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಈಗ ನೂರಾರು ಸಂಖ್ಯೆಯಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಎಚ್‌ಡಿ, ಡಿಪ್ಲೋಮಾ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹಾವೇರಿ, ಹಾಸನ ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಪಾಲಿಟೆಕ್ನಿಕ್ ಕೇಂದ್ರಗಳಿವೆ. ಮಂಗಳೂರಿನಲ್ಲಿ ಹೈನುಗಾರಿಕಾ ವಿಜ್ಞಾನ ಮಹಾ ವಿದ್ಯಾಲಯವಿದೆ. ಈ ವಿವಿಗಳಲ್ಲಿ ಆಫೀಸರ್ಸ್, ಟೀಚಿಂಗ್, ಟೆಕ್ನಿಕಲ್, ನಾನ್ ಟಿಚೀಂಗ್ ಹುದ್ದೆಗಳು ಸೇರಿ ಒಟ್ಟು 2104 ಖಾಲಿ ಇವೆ. ಹೀಗಾಗಿ ಎಲ್ಲಾ ಕೆಲಸವನ್ನೂ ಕೂಡಾ ಇರುವ ಸಿಬ್ಬಂದಿಯಿಂದಲೇ ಮಾಡಿಸಬೇಕಾಗಿರುವುದರಿಂದ ಕೆಲಸದ ಒತ್ತಡ ಜಾಸ್ತಿಯಾಗಿದ್ದು ಸಮಸ್ಯೆಯಾಗುತ್ತಿದೆ. ಕೂಡಲೇ ರಾಜ್ಯಪಾಲರು ಮುಂದೆ ಬಂದು ಖಾಲಿ ಇರುವ ಹುದ್ದೇಗಳನ್ನು ಭರ್ತಿ ಮಾಡಬೇಕೆಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.
ಬೀದರ್ ನಂದಿನಗರದಲ್ಲಿರುವ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಜಾನಿಗಳ ವಿಶ್ವವಿದ್ಯಾಲಯ ದೇಶದಲ್ಲಿಯೇ 12 ನೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿ ಓದಿದ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನೀಯರು ರಾಜ್ಯದ ಮೂಲೇ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜ್ಜಾನಿಗಳೂ ಕೂಡ ಆಗಿದ್ದಾರೆ. ಆದರೆ ಇಂತಹ ವಿವಿಯಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿದ್ದು, ಆಡಳಿತ ಯಂತ್ರವೇ ಇಲ್ಲಿ ಕುಸಿಯುತ್ತಿದೆ. ಇದರ ಜೊತೆಗೆ ಜಿಲ್ಲೆಯಲ್ಲಿರುವ ಪಶು ಸಂಗೋಪನಾ ಇಲಾಖೆಯಲ್ಲಿಯೂ ಕೂಡ ಸಿಬ್ಬಂದಿಯ ಕೊರತೆಯಿದೆ.
ನೂರಕ್ಕೂ ಹೆಚ್ಚು ಹುದ್ದೆಗಳು ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿಯಿವೆ. ಹೀಗಾಗಿ ರೈತರು ತಾವು ಚಿಕಿತ್ಸೆಗೆ ತಂದ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಸಾಮಾನ್ಯವಾಗಿ ಬೆಸಿಗೆಕಾಲ, ಮಳೆಗಾಲದಲ್ಲಿ ಜಾನುವಾರುಗಳಿಗೆ ನಾನಾ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ಪಶು ಇಲಾಖೆ ಪಾತ್ರ ಬಹಳ ಮುಖ್ಯವಾಗಿದೆ. ಆದರೆ 114 ಆಸ್ಪತ್ರೆಗಳ ಪೈಕಿ ಒಬ್ಬೊಬ್ಬ ವೈದ್ಯರು ತಲಾ ಎರೆಡೆರೆಡು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಎಮ್ಮೆ, ಆಕಳು, ಕುರಿ, ಮೇಕೆ ಸೇರಿದಂತೆ ಲಕ್ಷಾಂತರ ಜಾನುವಾರುಗಳಿವೆ. ಅವುಗಳ ಚಿಕಿತ್ಸೆಗೆ ತೊಂದರೆ ಆಗುತ್ತಿದೆ. ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪಶು ಸಂಗೋಪನಾ ಇಲಾಖೆ ಜಾರಿಗೆ ತರುತ್ತಿರುವ ನಾನಾ ಯೋಜನೆಗಳ ಅನುಷ್ಠಾನ ಕೂಡ ಕಷ್ಟಕರವಾಗುತ್ತಿದೆ.
ವಿಶ್ವ ವಿದ್ಯಾಲಯದಲ್ಲಿ ಬೀದರ್ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಟಿಚಿಂಗ್ ಹುದ್ದೆಗಳೇ ಇಲ್ಲಿ ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಪಾಠಕ್ಕೂ ಕೂಡ ತೊಂದರೆಯಾಗುತ್ತಿದೆ. ಹೀಗಾಗಿ ಖಾಲಿ ಇರುವ ಹುದ್ದೇಗಳನ್ನ ಬೇಗ ಭರ್ತಿ ಮಾಡಿ ಎಂದು ಇಲ್ಲಿನ ಜನರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ.