ಪಶು ಪಕ್ಷಿಗಳಿಲ್ಲದೇ ಮಾನವ ಸಂಕುಲ ಉಳಿಯುವುದು ಕಷ್ಟ

ಮೈಸೂರು,ಮೇ.21:- ಕೊರೋನಾ ಸೋಂಕು ತಡೆಗಟ್ಟಲು ಇಡೀ ರಾಷ್ಟ್ರವೇ ಲಾಕ್ ಡೌನ್ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಪ್ರಾಣಿಪಕ್ಷಿಗಳನ್ನು ರಕ್ಷಿಸುವುದು ಸಹ ನಮ್ಮ ಕರ್ತವ್ಯ, ಮೂಕಪ್ರಾಣಿಗಳನ್ನು ರಕ್ಷಿಸುವುಲ್ಲಿ ನಿರಂತರವಾಗಿ ಕಳೆದ 14 ದಿನಗಳಿಂದ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ತೆರಳಿ ಪ್ರಾಣಿಗಳಿಗೆ ಹಾಲು, ಅನ್ನ, ಮೊಟ್ಟೆ, ಬಿಸ್ಕೆಟ್, ಬ್ರೆಡ್ ಹಾಗೂ ಇನ್ನಿತರ ವಸ್ತುಗಳನ್ನು ನೀಡಲಾಗುತ್ತಿದ್ದು, ಲಾಕ್ ಡೌನ್ ಮುಗಿಯುವವರೆಗೂ ಈ ಕಾರ್ಯ ಮುಂದುವರಿಯಲಿದೆ.
ಇಂದು ಕೂಡ ಪ್ರಾಣಿ ಪಕ್ಷಿ ಸೇವಾ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕರಾದ ಎಲ್ ನಾಗೇಂದ್ರ ಅವರು ಕುಕ್ಕರಹಳ್ಳಿ ಕೆರೆ ಸುತ್ತಮುತ್ತ ಇರುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಜಾಗೃತಿ ಮೂಡಿಸಿದರು. ಬಳಿಕ ಮಾತನಾಡಿದ ಅವರು ಮಾತು ಬರುವ ಮನುಷ್ಯ ಯಾರನ್ನಾದರೂ ಕೇಳಿಕೊಂಡು ಆಹಾರ ಪಡೆದು ಜೀವಿಸುತ್ತಾನೆ. ಆದರೆ ಆ ಮೂಕ ಜೀವಿಗಳು ಯಾರನ್ನು ಕೇಳುತ್ತವೆ. ನಾವೇ ಅವುಗಳ ಸ್ಥಿತಿ ಅರ್ಥೈಸಿಕೊಂಡು ಸಹಾಯ ಮಾಡಬೇಕಾದ ತುರ್ತು ಇದೆ. ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನವರು ಯಾವುದೇ ಸಂದರ್ಭದಲ್ಲಿ ಸಹಾಯ ಮಾಡುವ ಮನಗಳನ್ನು ಒಗ್ಗೂಡಿಸುತ್ತಿದ್ದಾರೆ. ಜನರಿಗೆ ಮಾತ್ರವಲ್ಲದೇ ಪಶು,ಪಕ್ಷಿಗಳಿಗೂ ಮಾನವೀಯತೆ ತೋರಿ ಜೀವ ಉಳಿಸುವ ಕೆಲಸ ಶ್ಲಾಘನೀಯ,
ಅಲ್ಲದೇ ಪಶು ಪಕ್ಷಿಗಳಿಲ್ಲದೇ ಮಾನವ ಸಂಕುಲ ಉಳಿಯುವುದು ಕಷ್ಟ ಸಾಧ್ಯ ಆದ್ದರಿಂದ ಪ್ರತಿಯೊಬ್ಬರೂ ಈ ಕೆಲಸ ಮಾಡಬೇಕು ಎಂದರು.
ಈ ಸಂದರ್ಭ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬಿಜೆಪಿ ನರಸಿಂಹರಾಜ ಯುವಮೋರ್ಚಾ ಅಧ್ಯಕ್ಷ ಲೋಹಿತ್ ,ಮೈಸೂರು ಯುವ ಬಳಗ ನವೀನ್ ಇನ್ನಿತರರು ಹಾಜರಿದ್ದರು.