ಪಶು ಆಸ್ಪತ್ರೆಯಲ್ಲಿ ಸ್ಯಾನಿಟೈಸರ್ ವಿತರಣೆ

ಧಾರವಾಡ,ನ18- ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಲೋಕಲ್ ಸೆಂಟರ್ ಧಾರವಾಡ ಮತ್ತು ಜೆಎಸ್ ಡಬ್ಲ್ಯೂ ಸಿಮೆಂಟ್ ಕಂಪನಿಯ ವತಿಯಿಂದ ಪಶು ಆಸ್ಪತ್ರೆಯಲ್ಲಿ ಕೊರೋನಾ ತಡೆಗಾಗಿ ಸ್ಯಾನಿಟೈಸರ್ ಮತ್ತು ಸ್ಯಾನಿಟೈಸರ್ ಸ್ಟಾಂಡ್ ಗಳನ್ನು ನೀಡಲಾಯಿತು. ಪಶುಪಾಲನಾ ಮತ್ತು ಪಶು-ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಇಂ. ಸುನೀಲ ಬಾಗೇವಾಡಿ, ಸೆಕ್ರೆಟರಿ ಇಂ.ಅರುಣ ಶೀಲವಂತ, ಸಿದ್ದನಗೌಡ ಪಾಟೀಲ, ಹಾಗೂ ಸದಸ್ಯರಾದ ಶ್ರೀ ಸಂಜಯ ಕಬ್ಬೂರ, ವಿಜಯ ತೋಟಗೇರ. ಜೆಎಸ್ ಡಬ್ಲ್ಯೂ ಸಿಮೆಂಟ್ ಅಧಿಕಾರಿಗಳಾದ ಬಸವರಾಜ ಮಾದನಶೆಟ್ಟಿ, ತಿಪ್ಪಣ್ಣ ಅಠವಾನಿ ಹಾಗೂ ಇಲಾಖೆಯ ಅಧಿಕಾರಿಗಳಾದ
ಡಾ.ಟಿ ಪರಮೇಶ್ವರ ನಾಯಕ, ಡಾ.ಜಂಬುನಾಥ ಗದ್ದಿ, ಡಾ. ಸರಾಫ್, ಡಾ.ರಾಜಶೇಖರ ಕಂಟೆಪ್ಪಗೌಡ್ರ, ಬಸವರಾಜ ಬಡಿಗೇರ ಮುಂತಾದವರು ಹಾಜರಿದ್ದರು.