ಪಶು ಆಸ್ಪತ್ರೆಯಲ್ಲಿ ಗೋ ಪೂಜೆ ಸಂಭ್ರಮ

ಚಿತ್ತಾಪುರ:ನ.7: ದೀಪಾವಳಿ ಅಂಗವಾಗಿ ಬಲಿ ಪಾಡ್ಯಮಿ ದಿನ ಎಲ್ಲೆಡೆ ಗೋ ಪೂಜೆ ಅಥವಾ ಗೋವರ್ಧನ ಪೂಜೆ ನೆರವೇರಿಸುವುದು ವಾಡಿಕೆ. ಹೀಗಾಗಿ ರಾಜ್ಯಾದ್ಯಂತ ಶುಕ್ರವಾರ ಸಂಭ್ರಮ ಸಡಗರದಿಂದ ತಾಲೂಕಿನ ಪಶು ಆಸ್ಪತ್ರೆಯಲ್ಲಿ ಗೋವಿಗೆ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ತಾಲೂಕು ಪಶುವೈದ್ಯ ಅಧಿಕಾರಿಯಾದ ಡಾ.ಶಂಕರ್ ಕಣ್ಣೆ ಮಾತನಾಡಿ ಸರ್ಕಾರದ ಆದೇಶದನ್ವಯ ದೇಶಿ ತಳಿಯಾದ ಗೋವನ್ನು ಪೂಜಿಸುವುದರ ಮುಖಾಂತರ ಗೋವಿನ ಮಹತ್ವವನ್ನು ಜನರಲ್ಲಿ ಅರಿವಾಗುವುದರ ಜೊತೆಗೆ ಗೋವು ಸಂರಕ್ಷಣೆ ಆಗಬೇಕು ಎಂದರು.

ರೈತ ಮುಖಂಡರಾದ ನಾಗರೆಡ್ಡಿ ಗೋಪಸೇನ್ ಮಾತನಾಡಿ ರೈತರಲ್ಲಿ ಗೋವಿನ ಮಹತ್ವವನ್ನು ತಿಳಿಸುವುದರ ಜೊತೆಗೆ ಅದರ ಪಾಲನೆ ಪೆÇೀಷಣೆ ಆಗುವುದರ ಜೊತೆಗೆ ಅದರ ಆರಾಧನೆಯು ಸಹ ನಡೆಯಬೇಕು ಎಂದರು

ಈ ಸಂದರ್ಭದಲ್ಲಿ ಶ್ರೀಪಂಪನ ಸಜ್ಜನ್, ರತ್ನಕುಮಾರ್, ಶರಣಪ್ಪ, ಮಹಮ್ಮದ್ ಶಫಿ, ಸಾಯಬಣ್ಣ, ಹಾಗೂ ಇಲಾಖೆ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರಿದ್ದರು.