ಪಶುಸಂಗೋಪನೆ ಇಲಾಖೆ ನಿರ್ಲಕ್ಷ ನೀಲಿ ನಾಲಿಗೆ ರೋಗ ದಿಂದ ಸಾಯುತ್ತಿರುವ ಕುರಿಗಳು


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಸೆ.21: ತಾಲೂಕಿನಲ್ಲಿ ಲಕ್ಷಾಂತರ ಕುರಿಗಳಿದ್ದು ಅದನ್ನೇ ನಂಬಿ ಜೀವನ ಮಾಡುವ ಎಷ್ಟೋ ಕುಟುಂಬಗಳಿಗೆ ಭದ್ರತೆಯಿಲ್ಲ. ನೀಲಿ ನಾಲಿಗೆ ರೋಗ ದಿಂದ ಕುರಿಗಳು ಸಾಯುತ್ತಿದ್ದರು ಅವುಗಳಿಗೆ ಔಷಧಿ ನೀಡುವಲ್ಲಿ ಪಶುಸಂಗೋಪನೆ ಇಲಾಖೆ ನಿರ್ಲಕ್ಷ್ಯ ವಹಿಸುತ್ತದೆ ಎಂದು ಕುರುಬ ಸಮಾಜದ ತಾಲೂಕು ಘಟಕದ ಅಧ್ಯಕ್ಷರು ಬುಡ್ಡಿ ಬಸವರಾಜ್ ಆರೋಪಿಸಿದರು.
 ಪಟ್ಟಣದ ತಹಸೀಲ್ ಕಚೇರಿ ಎದುರು ಇಂದು ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ ತಾಲೂಕಿನ ಸೊನ್ನ ಗ್ರಾಮದಲ್ಲಿ 8000ಕ್ಕೂ ಹೆಚ್ಚು ಕುರಿಗಳು ಇದ್ದು. ಈ  ವರ್ಷ ನೂರಾರು ಕುರಿಗಳು ನೀಲಿ ನಾಲಿಗೆ ರೋಗ ಅಂಟಿಕೊಂಡು ಕುರಿಗಳು ಸಾವಿನಂಚಿನಲ್ಲಿ ತಲುಪಿವೆ. ಈಗಾಗಲೇ 8 ದಿನಗಳಲ್ಲಿ 20ಕ್ಕೂ ಹೆಚ್ಚು ಕುರಿಗಳು ಮೃತ ಪಟ್ಟಿದ್ದು.. ಈ ರೋಗಕ್ಕೆ ಔಷಧಿಯನ್ನು ಕೇಳಿದರೆ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಉಡಾಫೆ ಮತ್ತು ನಿರ್ಲಕ್ಷದಿಂದ ವರ್ತಿಸುತ್ತಿದ್ದಾರೆ. ಸಂಗೋಪನೆ ಇಲಾಖೆಯಲ್ಲಿ ಕೂಡ ಔಷಧಿ ದೊರೆಯುತ್ತಿಲ್ಲ.  ಇದರಿಂದ ಕುರಿಗಾಯಿಗಳಿಗೆ ತೊಂದರೆಯಾಗಿದೆ. ಅವರ ಜೀವಕ್ಕೆ ತೊಂದರೆಯಾಗಿದೆ. ಕೂಡಲೇ  ಇಲಾಖೆಯವರು ಔಷಧಿಯನ್ನು ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.
 ಸಮಾಜದ ಮುಖಂಡ ಮುಟ್ಟನಹಳ್ಳಿ ಕೊಟ್ರೇಶ್ ಮನವಿ ಪತ್ರ ಓದಿ ಓದಿ ಮನವಿ ಸಲ್ಲಿಸದರು.
 ಈ ಸಂದರ್ಭದಲ್ಲಿ ಎಮ್ ಶಿವರಾಜ್, ಎಂ ಪ್ರಭಾಕರ್, ನಸಿಪುಡಿ ಶಾಂತಪ್ಪ, ನೀಲಪ್ಪ, ಗಣೇಶ, ದೇವರಾಜ್, ಮರಡಿ ಸಿದ್ದಪ್ಪ, ವಿ ಶ್ರೀಕಾಂತ್, ಎನ್ ನಾಗರಾಜ್, ಕೆ ಪರಶುರಾಮ್, ಕೆ ಗಣೇಶ ಟಿ ಸುರೇಶ, ವರಲಹಳ್ಳಿ ಪರಸಪ್ಪ, ಪರ್ವತಪ್ಪ, ಗುಡ್ಡಪ್ಪ, ಎನ್ ಮಲ್ಲೇಶಪ್ಪ,, ಸೂರ್ಯಪ್ಪ, ದೇವ, ಗೋಣೆಪ್ಪ, ನಾಗರಾಜ್, ಎಚ್. ಎಂ. ವೀರಯ್ಯ, ಇತರರಿದ್ದರು.