ಪಶುಚಿಕಿತ್ಸಾ ಶಿಬಿರ ಉದ್ಘಾಟನೆ


ಹೊನ್ನಾಳಿ.ನ.೯; : ಹೈನುಗಾರಿಕೆ ಮೇಲೆ ರೈತ ಕುಟುಂಬಗಳು ಅವಲಂಬಿತವಾಗಿದ್ದು, ಹೈನುಗಾರಿಕೆ ಉಪಕಸುಬಾಗಿ ಮಾರ್ಪಟ್ಟಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ,ಹಾಲುಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕರುಗಳ ಪ್ರದರ್ಶನ ಮತ್ತು ಪಶುಚಿಕಿತ್ಸಾ ಶಿಬಿರನ್ನು ಉದ್ಘಾಟಿಸಿ ಮಾತನಾಡಿದರು.ಒಂದು ಕಾಲದಲ್ಲಿ ನಮ್ಮ ಹಳ್ಳಿಹಳ್ಳಿಗಳಲ್ಲಿ ಹಾಲನ್ನು ಮಾರುತ್ತಿರಲಿಲ್ಲಾ, ಆದರೇ ಇವತ್ತು ಅದು ಕಮರ್ಷಿಯಲ್ ಆಗಿದ್ದು ಹಾಲಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ ಎಂದ ಶಾಸಕರು ರೈತರು ಕೃಷಿಗೆ ಹೇಗೆ ಒತ್ತು ನೀಡುತ್ತಾರೋ ಅದೇ ರೀತಿ ಹೈನುಗಾರಿಕೆಗೂ ಒತ್ತು ನೀಡುತ್ತಿದ್ದಾರೆ ಎಂದರು.ರಾಜ್ಯಾದ್ಯಂತ ಹಸುಗಳಿಗೆ ಚರ್ಮಗಂಟುರೋಗ ಕಾಣಿಸಿಕೊಳ್ಳುತ್ತಿದ್ದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಪಶು ಇಲಾಖೆ ಸಾಕಷ್ಟು ಮುಂಜಾಗೃತೆ ಕ್ರಮ ಕೈಗೊಂಡಿದ್ದು, ನಮ್ಮಲ್ಲೂ ಅಧಿಕಾರಿಗಳಿಗೆ ರೋಗ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾಧ್ಯಂತ 105 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ದಾವಣಗೆರೆ-ಶಿವಮೊಗ್ಗಕ್ಕೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ಪ್ರತಿನಿತ್ಯ 87 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದರು.ಇನ್ನು ಹರಳಹಳ್ಳಿ ಗ್ರಾಮದಲ್ಲಿ ಪಶುವೈದ್ಯಕೀಯ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಇದನ್ನು ಮೇಲ್ದರ್ಜೆಗೆ ಹೇರಿಸ ಬೇಕೆಂಬ ಬೇಡಿಕೆ ಇದ್ದು ಈ ಬಗ್ಗೆ ಸಚಿವರೊಂದಿಗೆ ಮಾತನಾಡಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು..
ಕೋವಿಡ್ ಬಗ್ಗೆ ಜನರಿಗೆ ಇನ್ನೂ ಜಾಗೃತಿ ಇಲ್ಲಾ..ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಜನರಿಗೆ ಇನ್ನೂ ಕೂಡ ಜಾಗೃತಿ ಬಂದಿಲ್ಲಾ ಎಂದ ಶಾಸಕರು, ನನ್ನನ್ನು ಸೇರಿದಂತೆ ನಮ್ಮೆಲ್ಲರ ನಿರ್ಲಕ್ಷö್ಯದಿಂದಾಗಿ ಕೊರೊನಾ ಜಾಸ್ತಿಯಾಗುತ್ತಿದೆ. ಕೊರೊನಾ ಮಾಹಾಮಾರಿಯನ್ನು ನಾವೇ ಬರ ಮಾಡಿಕೊಳ್ಳುತ್ತಿದ್ದೇವೆ ಎಂದರು.ಕೊರೊನಾ ನಿಯಂತ್ರಣಕ್ಕೆ ಲಸಿಕೆ ಕಂಡು ಹಿಡಿಯಲು ಸಾಕಷ್ಟು ಪ್ರಯತ್ನ ನಡೆಯುತ್ತಿದ್ದು, ಆದಷ್ಟು ಬೇಗ ಲಸಿಕೆ ಕಂಡು ಹಿಡಿಯಲಿದ್ದು ಲಸಿಕೆಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದರು. ಅವಳಿ ತಾಲೂಕಿನ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಮನವಿ : ಹೊನ್ನಾಳಿ-ನ್ಯಾಮತಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಆರೋಗ್ಯ ಸಚಿವ ಸುಧಾಕರ್ ಅವರ ಬಳಿ ಮನವಿ ಮಾಡಲಾಗಿದೆ ಎಂದ ಶಾಸಕರು, ಹೊನ್ನಾಳಿಯ 100 ಹಾಸಿಗೆಯ ಆಸ್ಪತ್ರೆ 200 ಹಾಸಿಗೆಗೆ ಮೇಲ್ದರ್ಜೆಗೆರಿಸಲು 15 ಕೋಟಿ ಹಣ ಕೇಳಿದ್ದೇನೆ. ಅದೇ ರೀತಿ ನ್ಯಾಮತಿ ತಾಲೂಕು ಆಸ್ಪತ್ರೆಯಲ್ಲಿ 30 ಹಾಸಿಗೆ ಇದ್ದು ಅದನ್ನು 100 ಹಾಸಿಗೆ ಆಸ್ಪತ್ರೆ ಮೇಲ್ದಜೇಗೆರಿಸಿ ಕಟ್ಟಡ ನಿರ್ಮಾಣಕ್ಕೆ 27 ಕೋಟಿ ಹಣ ಕೇಳಿದ್ದೇನೆ ಎಂದ ಶಾಸಕರು, ಇದರ ಜೊತೆ ಅವಳಿ ತಾಲೂಕಿನ ಬೆಳಗುತ್ತಿ, ಕತ್ತಿಗೆ, ಸಾಸ್ವೇಹಳ್ಳಿ. ಚೀಲೂರು, ಕೂಲಂಬಿ, ಕುಂಕುವ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು 20.40 ಕೋಟಿ ಹಣ ಕೇಳಿದ್ದು ಒಟ್ಟು 62.40 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಆರೋಗ್ಯ ಸಚಿವರ ಬಳಿ ಮನವಿ ಮಾಡಿದ್ದೇನೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ದೀಪಾಜಗದೀಶ್, ಕೆಎಂಎಫ್ ಉಪಾಧ್ಯಕ್ಷರಾದ ಕಂಚಿಗೇನಹಳ್ಳಿ ಬಸವರಾಜಪ್ಪ, ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಬಣಕಾರ್, ಹಾಲು ಉತ್ಪಾದಕರ ಸಹಕಾರ ಸಂಗದ ನಿರ್ದೇಶಕರಾದ ಬಸವರಾಜ್ ಸ್ಥಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವೀರೇಶಪ್ಪ ಸೇರಿದಂತೆ ಪಶು ಇಲಾಖೆ ಅಧಿಕಾರಿಗಳು ಮತ್ತಿತರರಿದ್ದರು..