ಪವಿತ್ರ ರಂಜಾನ್ ಹಬ್ಬ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಎ.12:- ವರ್ಷಕ್ಕೂಂದು ಬಾರಿ ತಿಂಗಳು ಪೂರ್ತ ವ್ರತವನ್ನು ಆಚರಿಸುತ್ತಿರುವ ನನ್ನ ಸೋದರ-ಸೋದರಿಯರ ಕುಟುಂಬಗಳಿಗೆ ಶುಭ-ಸಂದೇಶ ವಿನಿಮಾಯ ಮಾಡುತ್ತಿರುವುದು ಬೇರೆ ಯಾವುದೇ ಉದ್ದೇಶದಿಂದಲ್ಲ ಶಾಸಕರಾದವರು ನಮ್ಮ ಜೋತೆಯಲ್ಲಿದ್ದಾರೆ ನಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾರೆ ಎಂಬ ದೈರ್ಯ ನಿಮ್ಮಲ್ಲಿರಲಿ ಆಗ ನಿಮ್ಮಗೆ ನಿರ್ಭೀತಿಯಿಂದ ಜೀವನ ಸಾಗಿಸಲಿ ಎಂಬ ಉದ್ದೇಶದಿಂದ ನಾನು ನೀಡುತ್ತಿರುವ ಶುಭಸಂದೇಶದ ಉಡುಗೂರೆ ಯಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿ ವತಿಯಿಂದ ಏರ್ಪಡಿಸಿದ ಸಾಮೂಹಿಕ ಪ್ರಾರ್ಥನ ಸಭೆಯಲ್ಲಿ ಪಾಳ್ಗೋಂಡು ಮಾತನಾಡಿ ಶಾಸಕರು ಈದ್ ಉಲ್ ಫಿತರ್ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುವಸಂತೋಷದಾಯಕ ಸಂದರ್ಭವಾಗಿದ್ದು ಉಪವಾಸದ ಪವಿತ್ರ ತಿಂಗಳಾದ ರಂಜಾನ್ ಅಂತ್ಯವನ್ನು ಈ ಹಬ್ಬ ಸೂಚಿಸುತ್ತದೆ. ಅಲ್ಲಾಹು ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಸಮೃದ್ಧಿ, ದೀರ್ಘಾಯಸ್ಸು ಮತ್ತು ಸಂಪತ್ಭರಿತ ಜೀವನವನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ ಎಂದರು.
ನಂತರ ಮಾತನಾಡಿದ ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್ ಖಾನ್ ಸುಡೂ ಬಿಸಲಿನ ತಪಾಮಾನದಲ್ಲಿ ಸತತ ಒಂದು ತಿಂಗಳು ವ್ರತವನ್ನು ಆಚರಿಸುತ್ತಿರುವ ಪುರಷರು, ಮಹಿಳೆಯರು, ವೃದ್ದರು ಮತ್ತು ಮಕ್ಕಳು ಒಂದು ಹಾನಿ ನೀರಿಗೂ ಲೆಕ್ಕಿಸದೇ ಅಲ್ಲಾಹುನ ಅನುಗ್ರಹದಿಂದ ಕಟ್ಟಿನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದು ಇಂದು ಇಸ್ಲಾಂ ಧರ್ಮದ ಸಂಕೇತಾವಾಗಿದೆ ಎಂದು ರಂಜಾನ್ ಹಬ್ಬದ ವಿಶೇಷತೆಯ ಬಗ್ಗೆ ಗುನಗಾಣ ಮಾಡಿದರು.
ಜಾಮೀಯ ಮಸೀದಿಯಿಂದ ಜಮಾವಣೆಗೊಂಡು ಮೆರವಣಿಗೆಯ ಮೂಲಕ ಗರಡು ಗಂಭ ವೃತ್ತ, ಹುಣಸೂರು ರಸ್ತೆ ಹಾಗೂ ಕಾಳೇನಹಳ್ಳಿ ರಸ್ತೆ ಮಾರ್ಗವಾಗಿ ತೆರಳಿ ಪವಿತ್ರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಮಾಡುಲು ಅಕ್ಕ-ಪಕ್ಕದ ಗ್ರಾಮಗಳಿಂದ ಪಟ್ಟಣದ ಈದ್ಗಾ ಮೈದಾನಕ್ಕೆ ಸಾವಿರಾರು ಮುಸ್ಲಿಂ ಬಾಂದವರಿಗೆ ಜಾಮೀಯ ಮಸೀದಿಯ ಧರ್ಮಗುರುಗಳು ಪ್ರವಚನ ನೀಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತ್ತು ಎಂದರು.
ಈ ಸಂದರ್ಭದಲ್ಲಿ ಮೂಳೆ ತಜ್ಞ ಡಾ.ಮೆಹಬೂಬ್ ಖಾನ್, ಜಾಮೀಯ ಮಸೀದಿ ಧರ್ಮಗುರುಗಳಾದ ಮುಫ್ತಿ ಖಾಸೀಂ ರಾಝಾ ಮನ್ಝಾರಿ, ಮುಫ್ತಿ ಜೈನೂಲ್ ಅಬಿದೀನ್ ಮನ್ಝಾರಿ, ಮುಹಮ್ಮದ್ ಆಲಿ ಹುಸೇನ್, ಅರ್ಷದುಲ್ ಖಾದ್ರಿ, ಮೌಲಾನ ದನಿಶ್ ರಾಝಾ, ಮುಬಾರಕ್, ಪುರಸಭಾ ಸದಸ್ಯರಾದ ಜಾವೀದ್ ಪಾಷ, ಸಿದ್ದಿಕ್, ಮಾಜಿ ಅಧ್ಯಕ್ಷ ಸೈಯಾದ್ ಅಸ್ಲಂ, ಜಾಮೀಯ ಮಸೀದಿ ಅಧ್ಯಕ್ಷ ಅಫ್ಸರ್ ಬಾಬು, ಕಾರ್ಯದರ್ಶಿ ತಸವ್ವರ್ ಪಾಷ, ಸದಸ್ಯರಾದ ಇರ್ಷಾದ್, ನಸೀರ್, ಮುಜಾಹೀದ್, ಕಲೀಂ, ವಸೀಂ, ಫರೋಕ್, ಸಬೀರ್, ಮಾಲಿಕ್, ನೇಮತ್, ರಫೀ, ಬಸೀರ್, ಪತ್ರಕರ್ತ ಮುಹಮ್ಮದ್ ಶಬ್ಬೀರ್ ಮುಖಂಡರಾದ ವಹೀದ್, ಸೈಯಾದ್ ಜಾಬೀರ್, ಖಾದರ್, ಅಫ್ಸರ್.ಕೆ.ಎಂ, ಇರ್ಫಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು