ಪವಿತ್ರ ಮಂತ್ರಾಕ್ಷತೆ ವಿತರಣೆ

ಸೇಡಂ,ಜ,13: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಗ್ರಾಮದ ಹಿರಿಯರು ಯುವಕರು ಜ,22 ರಂದು ಶ್ರೀರಾಮಮಂದಿರನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ಕ್ಷೇತ್ರದಿಂದ ಬಂದಿರುವಂತಹ ಪವಿತ್ರ ಮಂತ್ರಾಕ್ಷತೆ ಸಾಮೂಹಿಕವಾಗಿ ವಿತರಿಸಲಾಯಿತು. ಈ ವೇಳೆಯಲ್ಲಿ ಶ್ರೀ ಭಾಲತಪೆÇೀನಿಧಿ ಕೇದಾರಲಿಂಗ ಸ್ವಾಮಿಗಳು ವಿರಕ್ತಮಠ ಬೆನಕನಹಳ್ಳಿ ಯುವ ಮುಖಂಡರಾದ ಬಸವರಾಜ ಪಾಟೀಲ್, ಯುವ ಮುಖಂಡರಾದ ಶಿವಲಿಂಗ ರೆಡ್ಡಿ ಎಮ್ ಪಾಟೀಲ್ ರಾಜು ಸ್ವಾಮಿ ಸ್ಥಾವರಮಠ, ರಾಘವೇಂದ್ರ ಕುಲಕರ್ಣಿ, ವೀರೇಶ್ ಕೊಟಗಿ,ರುದ್ರು ಕಂಬಾರ, ಗುರುನಾಥ್ ಬಾಳಿಕಾರ ವೆಂಕಟಚಾರಿ ಜೋಶಿ ಇದ್ದರು.