ಪವಿತ್ರ ಕುರ್‍ಆನ್ ನೈಜತೆ ಅರಿತುಕೊಳ್ಳದ ನಕ್ವಿ: ಅಹ್ಮದಿಯಾ ಸಂಘಟನೆ ಪ್ರತಕ್ರಿಯೆ

ಕಲಬುರಗಿ,ಮಾ.23- ಪವಿತ್ರ ಕುರ್‍ಆನಿನ ನೈಜತೆಯನ್ನು ಅರಿತುಕೊಳ್ಳದೆ ಅದರ 26 ಅದ್ಯಾಯಗಳನ್ನು ಕೈಬಿಡುವಂತೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವುದನ್ನು ಅಂತರಾಷ್ಟ್ರೀಯ ಅಹ್ಮದಿಯಾ ಮುಸ್ಲೀಂ ಸಂಘಟನೆಯ ಭಾರತ ರಾಷ್ಟ್ರೀಯ ಮಾಧ್ಯಮ ವಕ್ತಾರ ಕೆ.ತಾರೀಖ ಅಹ್ಮದ ಬಲವಾಗಿ ಖಂಡಿಸಿದ್ದಾರೆ.
ಪವಿತ್ರ ಕುರಆನಿನ 26 ಅದ್ಯಾಯಗಳು ಹಿಂಸೆ ಮತ್ತು ಉಗ್ರವಾದಕ್ಕೆ ಪುಷ್ಟಿ ನೀಡುತ್ತವೆ ಮತ್ತು ಇವುಗಳನ್ನು ನಂತರದಿನಗಳಲ್ಲಿ ಪವಿತ್ರ ಕುರ್‍ಆನಿನಲ್ಲಿ ಸೇರಿಸಲಾಗಿದೆ ಎಂಬ ಶಿಯಾ ವಕ್ಫ ಬೋರ್ಡಿನ ಮಾಜಿ ಅಧ್ಯಕ್ಷ ವಾಸಿಂ ನಕ್ವಿ ಅವರ ಆರೋಪ ವು ಸಾರ್ವಜನಿಕ ಹಿತಕ್ಕೆ ವಿರುದ್ದವಾಗಿದೆ ಮತ್ತು ದೇಶದ ಶಾಂತಿ- ಸುವ್ಯವಸ್ಥೆಯನ್ನು ದುರ್ಬಲ ಗೊಳಿಸುವುದಾಗಿದೆ.
ಪವಿತ್ರ ಕುರ್‍ಆನ್‍ನಲ್ಲಿ ಯಾವುದೇ ಒಂದಕ್ಷರ ಅಷ್ಟೆ ಅಲ್ಲ ಅದರಲ್ಲಿನ ಪೂರ್ಣ ಮತ್ತು ಅಲ್ಪ ವಿರಾಮಗಳಲ್ಲಿ ಒಂದನ್ನು ಸಹ ತೆಗೆಯಲು ಹಾಗೂ ಸೇರಿಸಲು ಸಾಧ್ಯವಿಲ್ಲ ಎಂದು ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿದ್ದಾರೆ.
ಪವಿತ್ರ ಕುರ್‍ಆನಿನ 26 ಅಧ್ಯಾಯಗಳ ನೈಜತೆ ಮತ್ತು ಅದರಲ್ಲಿ ಅಡಗಿರುವ ಸತ್ಯ ಸಂದೇಶಗಳನ್ನು ಮನವರಿಕೆ ಮಾಡಿಸಿ ಕೊಡಲು ಅಹ್ಮದಿಯಾ ಮುಸ್ಲೀಂ ಸಂಘಟನೆ ಸಿದ್ದವಿದೆ ಎಂದು ಅವರು ಸವಾಲು ಹಾಕಿದ್ದಾರೆ.
ಸರ್ವ ಶಕ್ತಿವಂತನಾದ ಈಶ್ವರನಿಂದ ಈ ಪವಿತ್ರ ಕುರ್‍ಆನ್ ಪ್ರತಿಯೊಂದು ಶಬ್ದಗಳು ಅವತರಿಸಲ್ಪಟ್ಟಿವೆ. ಇದು ಸನ್ಮಾರ್ಗ ದರ್ಶನ ಮಾಡಿಸುತ್ತದೆ. ಕರುಣೆ, ಸಹೋದರತೆ, ಮಾನವೀಯ ಮೌಲ್ಯಗಳನ್ನು ಉಪದೇಶಿಸುವ ಈ ಪವಿತ್ರ ಕುರ್‍ಆನ್ ನಲ್ಲಿನ ಒಂದು ಸೂಕ್ತಿ-ವಚನದಲ್ಲಿ ಹೀಗೆ ಹೇಳಲಾಗಿದೆ “ಯಾವೊಬ್ಬ ವ್ಯಕ್ತಿಯನ್ನು ಅನ್ಯಾಯವಾಗಿ ಕೊಲೆ ಮಾಡಿದಲ್ಲಿ ಈಡಿ ಮಾನುಕುಲವನ್ನೆ ಹತ್ಯೆ ಮಾಡಿದಂತೆ” ಎಂದು ಎಚ್ಚರಿಕೆಯನ್ನು ನೀಡಿದೆ.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸ್ವಾರ್ಥಿಗಳು ವಿಶ್ವದಲ್ಲಿ ಧರ್ಮದ ಹೆಸರಿನಲ್ಲಿ ಗೋಂದಲ ಮತ್ತು ಆಶಾಂತಿಯನ್ನು ಸೃಷ್ಠಿಸುವ ಉದ್ದೇಶದಿಂದ ಪವಿತ್ರ ಕುರ್‍ಆನಿನ ಕೆಲ ಅಧ್ಯಾಯಗಳನ್ನು ದುರುಪಯೋಗ ಪಡಿಸಿಕೊಂಡು ಉಗ್ರವಾದಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ.
ಪವಿತ್ರ ಕುರ್‍ಆನಿನ ಸಂರಕ್ಷಣೆಯ ಹೊಣೆಯನ್ನು ಸ್ವಯಂ ಅಲ್ಲಾಹನೆ ವಹಿಸಿಕೊಂಡಿದ್ದಾನೆ. ಕಳೆದ 1400 ವರ್ಷಗಳಿಂದ ಒಂದಕ್ಷರವೂ ಹಿಂದೆ ಮುಂದೆ ಆಗದಂತೆ ಸುರಕ್ಷಿತವಾಗಿ ಭಕ್ತರ ಹೃದಯಲ್ಲಿ ಸಂರಕ್ಷಿಸಲ್ಪಟ್ಟಿರುವುದೇ ಇದಕ್ಕೆ ಸಾಕ್ಷಿ.
ಭಾರತೀಯರಾದ ನಾವು ಎಲ್ಲ ಧರ್ಮಗಳನ್ನು ಗೌರವಿಸುವ ಪರಂಪರೆ ಸಾಂಸ್ಕøತಿಯನ್ನು ಹೊಂದಿದ್ದೇವೆ. ಧರ್ಮದ ಹೆಸರಿನಲ್ಲಿ ನಂಬಿಕೆ ಮತ್ತು ಭಾವನೆಗಳೋಂದಿಗೆ ಚಲ್ಲಾಟವಾಡುವುದು ನ್ಯಾಯ ಸಮ್ಮತವಲ್ಲ. ಪವಿತ್ರ ಕುರ್‍ಆನಿನ ಕುರಿತು ಮಾತನಾಡುವವರು ಮೊದಲು ಸರಿಯಾದ ಅಧ್ಯಾನ ಮತ್ತು ಪವಿತ್ರ ಕುರ್‍ಆನಿನ ನೈಜತೆಯನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.