ಪವಿತ್ರಾಗೆ ಸಂಗೀತ ವಿಷಯದಲ್ಲಿ ಚಿನ್ನದ ಪದಕ

ಕಲಬರಗಿ,ನ.22-ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದ ಸ್ಥಾವರಮಠ ಮನೆತನದ ಗುರುಶಾಂತಯ್ಯ ಸ್ಥಾವರಮಠ ಅವರ ಸುಪುತ್ರಿ ಆಕಾಶವಾಣಿ ಹಾಗೂ ದೂರದರ್ಶನದ ಯುವ ಕಲಾವಿದೆ ಪವಿತ್ರಾ ಜಿ.ಎಸ್. ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 38ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ವಿಷಯಲ್ಲಿ ಪದ್ಮಭೂಷಣ ಡಾ.ಪಂ.ಪುಟ್ಟರಾಜ ಗವಾಯಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕುಲಸಚಿವರಾದ ಪ್ರೊ. ಸಿ.ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ. ಸಂಜೀವಕುಮಾರ ಕೆ.ಎಂ. ಮುಂತಾದವರು ಉಪಸ್ಥಿತರಿದ್ದರು.
ಪವಿತ್ರಾ ಜಿ.ಎಸ್. ಅವರು ಚಿನ್ನದ ಪದಕ ಪಡೆದಿದ್ದಕ್ಕೆ ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಎ. ಕೋಣೆ ಹಾಗೂ ಕಾರ್ಯದರ್ಶಿ ಅಂಬಾರಾಯ ಎಂ. ಕೋಣೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.