
ಮುಂಬೈ,ಮೇ.೪- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ ನೀಡಿರುವ ಹಿನ್ನೆಲ್ಲೆಯಲ್ಲಿ ಅದರಿಂದ ತೆರವಾದ ಸ್ಥಾನಕ್ಕೆ ಪುತ್ರಿ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಎನ್‌ಸಿಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾಗಿ ಆಯ್ಕೆಯಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಸುಪ್ರಿಯಾ ಸುಳೆ ೨೦೨೪ ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಅವರ ಹೆಗಲ ಮೇಲೆ ಬೀಳಲಿದೆ ಎನ್ನಲಾಗಿದೆ.
ಎನ್‌ಸಿಪಿ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಬಹುತೇಕರು ಸುಪ್ರಿಯಾ ಸುಳೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಮನವೊಲಿಸುವ ಕೆಲಸ ಮಾಡಿದ್ದಾರಡ ಎಂದು ಮೂಲಗಳು ತಿಳಿಸಿವೆ
ಶರದ್ ಪವಾರ್ ರಾಜೀನಾಮೆ ಹಿಂಪಡೆಯಲು ನಿರಾಕರಿಸಿದರೆ ಪುತ್ರಿ ಸುಪ್ರಿಯಾ ಸುಳೆ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಸುಳೆ ಅವರು ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸಬೇಕು, ಅಜಿತ್ ಅವರು ರಾಜ್ಯದ ವಿಷಯಗಳ ಬಗ್ಗೆ ಗಮನ ಹರಿಸಬೇಕು ಮತ್ತು ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕು ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ ಎಂದು ಮೂಲಗಳು ತಿಳಿಸಿವೆ
ಎನ್‌ಸಿಪಿಯಲ್ಲಿನ ಸಾಮಾನ್ಯ ಅಭಿಪ್ರಾಯವೆಂದರೆ ಅಜಿತ್ ಪವಾರ್ ಅವರು ರಾಜ್ಯ ರಾಜಕೀಯ ವಿಷಯಗಳ ಮೇಲೆ ಗಮನಹರಿಸಬೇಕು, ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಎಂವಿಎ ಬಹುಮತ ಪಡೆದರೆ ಅವರನ್ನು ಸಿಎಂ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುತ್ತದೆ ಎನ್ನುವ ತೀರ್ಮಾನಕ್ಕೆ ಬರಲಾಗಿದೆ.
ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ ಮತ್ತು ಸುಪ್ರಿಯಾ ಸುಳೆ ಇಬ್ಬರೂ ಉತ್ತರಾಧಿಕಾರಿಗಳಾಗಿ ಪರಿಗಣನೆಯ ವಲಯದಲ್ಲಿದ್ದರು. ಆದರೆ, ಪಟೇಲ್ ಅವರು ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.
ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಅವರು ಉನ್ನತ ಹುದ್ದೆಯ ಮುಂಚೂಣಿಯಲ್ಲಿದೆ ಎಂದು ನಂಬಲಾಗಿದೆ, ಅವರ ಅನುಪಸ್ಥಿತಿಯು ಎದ್ದುಕಾಣುತ್ತದೆ.
ನಾಳೆಮಹತ್ವದ ಸಭೆ
ಹೊಸ ಎನ್‌ಸಿಪಿ ಮುಖ್ಯಸ್ಥರ ಆಯ್ಕೆಗಾಗಿ ರಚಿಸಿರುವ ಸಮಿತಿಯ ಸಭೆಯನ್ನು ಮೇ ೬ ರ ಬದಲಿಗೆ ನಾಳೆ ನಡೆಯಲಿದೆ.
ಈ ಸಭೆಯಲ್ಲಿ ಎನ್‌ಸಿಪಿ ನೂತನ ಅಧ್ಯಕ್ಷರನ್ನು ಆಯ್ಕೆ ಘೋಷಣೆ ಮಾಡುವ ನಿರೀಕ್ಷೆ ಇದೆ.