ಪವಾಡ ಪುರುಷ ಬೊಮ್ಮಗೊಂಡೇಶ್ವರ: ಮಾಳಪ್ಪ ಅಡಸಾರೆ

ಬೀದರ,ಅ.14: ಮಹಾತ್ಮ ಬೊಮ್ಮಗೊಂಡೇಶ್ವರ ಪವಾಡ ಪುರುಷರು. ಅವರ ಜೀವನ ಚರಿತ್ರೆ ಪ್ರತಿಯೊಬ್ಬರು ಓದಲೇಬೇಕು ಕಾರಣ ಇವರೊಬ್ಬರು ದೈವಿ ಪುರಷ ಮಹಾಶರಣ ವೀರ, ಶೂರ, ಬೀದರ ಕೋಟೆ ನಿರ್ಮಾಣಕ್ಕೆ ಸಹಾಯಹಸ್ತ ನೀಡಿದವರು ಎಂಬ ಪ್ರತೀತಿ ಇದೆ. ನೀರಡಿಸಿ ಬಂದ ಬಹುಮನಿ ಮನೆತನದ ರಾಜರ ಸೈನಿಕರು ಆನೆ, ಕುದುರೆ, ಕಾಲಾಳುಗಳಿಗೆ ನೀರು ಕುಡಿಸಿದ ಪುಣ್ಯಾತ್ಮ. ಇವರು ಕುರಿ ಕಾಯುವ ಕಾಯಕದಲ್ಲಿ ನಿರತರಾಗಿರುವಾಗಲೇ ರಾಜರಿಗೆ ನೀರು ಕುಡಿಸಿ ಮೂರು ಹಕ್ಕುಗಳನ್ನು ಪಡೆದುಕೊಂಡ ಪುಣ್ಯಾತ್ಮ. ಚಿದ್ರಿ ಗ್ರಾಮದಲ್ಲಿ ಇವರ ಜನನ ತಂದೆ ಶಿವಗೊಂಡ, ತಾಯಿ ಗಂಗವ್ವ ದಂಪತಿಗಳ ಪುತ್ರನೇ ಬೊಮ್ಮಗೊಂಡೇಶ್ವರ ಬೀದರ ಜಿಲ್ಲೆಯ ಗೊಂಡ ಸಮಾಜದ ಜನ ಇವರಿಗೆ ಆರಾಧ್ಯ ದೈವ ಎಂದು ಪೂಜಿಸುತ್ತಾರೆ. ಇದರ ಕಾರಣದಿಂದಲೆ ಬೀದರ ಜಿಲ್ಲಾದಾದ್ಯಂತ ಇವರ ಪ್ರತಿಮೆಗಳು ನೋಡಲು ಸಿಗುತ್ತವೆ ಎಂದು ಗೊಂಡ ಸಮಾಜದ ಮುಖಂಡ ಪತ್ರಕರ್ತ ಮಾಳಪ್ಪ ಅಡಸಾರೆ ಹೇಳಿದರು.
ಅವರು ಬೀದರ ನಗರದ ಬೀರಲಿಂಗೇಶ್ವರ ಮಂದಿರದಲ್ಲಿ ಬೀದರ ಜಿಲ್ಲಾ ಗೊಂಡ ನೌಕರರ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.
ಬೊಮ್ಮಗೊಂಡೇಶ್ವರರಿಂದ ಗೊಂಡ ಸಮಾಜಕ್ಕೆ ಭಾರಿ ಲಾಭವಾಗಿದೆ. ಬೊಮ್ಮಗೊಂಡೇಶ್ವರರ ಜೀವನ ಚರಿತ್ರೆ ಬಗ್ಗೆ ಪ್ರತಿಯೊಬ್ಬರು ಅವರ ಪುಸ್ತಕಗಳು, ಕ್ಯಾಸೆಟ್‍ಗಳು ಲಭ್ಯವಿದ್ದು ಅವರ ಬಗ್ಗೆ ತಿಳಿದುಕೊಳ್ಳವುದು ಅವಶ್ಯಕತೆ ಇದೆ ಎಂದು ಮಾರ್ಮಿಕವಾಗಿ ಹೇಳಿದರು.
ದಕ್ಷಿಣ ಭಾರತದ ಟ್ರೈಬಲ್ ಐಕಾನ್ ಎಂದೇ ಖ್ಯಾತಿ ಪಡೆದ ಕ್ರಾಂತಿವೀರ ಕುಮರಮ್ ಭೀಮ್ ರವರ ಜೀವನ ಚರಿತ್ರೆಯ ಬಗ್ಗೆ ಹಿರಿಯ ಸಾಹಿತಿ ಸುನಿತಾ ಬಿರಾದಾರ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೀದರ ಜಿಲ್ಲಾ ಉಪ ನೊಂದಣಾಧಿಕಾರಿ ಸುಭಾಷ ಹೊಸಳ್ಳಿ ಅವರು ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ವಸತಿ ಗೃಹಗಳು ಅವಶ್ಯಕತೆ ಇದ್ದು, ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್‍ಗಳು ಅವಶ್ಯಕತೆ ಇವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಗೊಂಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಮ್.ಎಸ್. ಕಟಗಿ ಅವರು ಮಾತನಾಡಿ, ಸಮಾಜದಲ್ಲಿ ಜಾಗೃತೆಯ ಅವಶ್ಯಕತೆ ಇದೆ. ಸಂಘಟಿತವಾಗಿ ಸಮಾಜದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ರಘುನಾಥ ಭೂರೆ ಆಗಮಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಗೊಂಡ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶಿವರಾಜ ಬಿರಾದಾರ ವಹಿಸಿದರು. ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಡಾ. ಶ್ರೀಮತಿ ನಾಗಮ್ಮಾ ಎಚ್. ಭಂಗರಗಿ ಅವರಿಗೆ ಎಸ್.ಎಮ್. ಹಿರೇಮಠ ನಾಟಕ ಸಾಹಿತ್ಯ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪುರಸ್ಕøತರಿಗೆ ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಮಾರ್ಥಂಡಪ್ಪ ರವರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕøತರಾದ ಸಾಹಿತಿ ಸಂಜೀವಕುಮಾರ ಅತಿವಾಳೆ, ರಾಮಚಂದ್ರಪ್ಪ ಮುರಾರಿರವರಿಗೆ ಸನ್ಮಾನಿಸಲಾಯಿತು.
ಬೀದರ ವಿದ್ಯುತ್ ವಿಭಾಗದಲ್ಲಿ ಬಡ್ತಿ ಹೊಂದಿರುವ ನೌಕರರಾದ ಮಚ್ಛಂದ್ರ ಗೊಂಡ, ರೋಹಿತ್, ನವನಾಥ, ಸತೀಷ, ವೀರಗೊಂಡ ಡುಮ್ಮೆ, ಬಾಲಾಜಿ ಡುಮ್ಮೆ, ಸಂತೋಷ, ಶ್ರೀಕಾಂತಿ, ದತ್ತು ಬಾಲ್ಕಿ, ರಮೇಶ ನಂದಗಾಂವ, ರಾಜಕುಮಾರ, ಶಾಂತಕುಮಾರ, ಜ್ಞಾನೇಶ ಯರನ್ನಳ್ಳೆ, ಸುರೇಶ, ನವನಾಥ ಜೆ. ರಾಜಕುಮಾರ, ಸಂತೋಷ ಎಸ್.ರವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಪತಿ ಮೇತ್ರೆ ಮಾಡಿದರು. ಪ್ರಸ್ತಾವಿಕವಾಗಿ ವಿಜಯಕುಮಾರ ಡುಮ್ಮೆ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕುಶಾಲ ಯರನಳ್ಳಿ ಸ್ವಾಗತಿಸಿದರು.