ಪವಾಡ ಪುರಷ ಸಿದ್ದಲಿಂಗೇಶ್ವರ ಮಹಿಮೆ ಅಪಾರ : ಡಾ. ಬಸವಲಿಂಗ ಅವಧೂತರು

ಭಾಲ್ಕಿ:ಏ.19: ಮಹಾ ಮಾನವತಾವಾದಿ ಪವಾಡ ಪುರುಷ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ಮಹಿಮೆ ಅಪಾರವಾಗಿದೆ ಎಂದು ಮಲ್ಲಯ್ಯಗಿರಿ, ದೇಗಲಮಡಿ, ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ| ಬಸವಲಿಂಗ ಅವಧೂತರು ಹೇಳಿದರು.
ತಾಲೂಕಿನ ಶ್ರೀ ಸಿದ್ದೇಶ್ವರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ 77ನೇ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಸದ್ಗುರು ಸಿದ್ದಲಿಂಗೇಶ್ವರರು ಅನಾರೋಗ್ಯ ಮತ್ತು ದು:ಖವನ್ನು ಗುಣಪಡಿಸುವ ಮಹಾನ್ ಶಕ್ತಿ ಹೊಂದಿದ್ದಾರೆ. ಸಿದ್ದೇಶ್ವರ ಗ್ರಾಮದ ಅಧಿ ದೇವತೆಯಾದ ಶ್ರೀ ಸಿದ್ದಲಿಂಗೆಶ್ವರರ ಭೌಕ್ತರು ಭಕ್ತಿಯಿಂದ ಬೇಡಿದರೆ ವರವು ನೀಡಿದ ಮಹಾನ್ ಪವಾಡಪುರುಷರಾಗಿದ್ದಾರೆ.
ನಿತ್ಯವೂ ಭಕ್ತಿಯಿಂದ ದೇವರ ಜಪೂಜೆ ಮಾಡಬೇಕು. ಅಧ್ಯಾತ್ಮದ ಒಲವು ಬೆಳೆಸಿಕೊಳ್ಳಬೇಕು. ಮೂಢನಂಬಿಕೆ, ಕಂದಾಚರಣೆಗಳಿಂದ ದೂರ ಇರಬೇಕು. ಹಿರಿಯರನ್ನು ಗೌರವಿಸಬೇಕು. ಜನ್ಮಕೊಟ್ಟ ತಂದೆ, ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಮದ ಕುಟುಂಬದಲ್ಲಿ ಬಾಳಬೇಕು ಎಂದು ಸಲಹೆ ನೀಡಿದರು. ಇಂದಿನ ಯುವಕರು ಮಾದಕ ವಸ್ತುಗಳ ಚಟಕ್ಕೆ ಬಿಡ್ಡು ಜೀವನ ವ್ಯರ್ಥ ಮಡಿಕೊಳ್ಳುತ್ತಿದ್ದಾರೆ. ಪಾಲಕರು ಮಕ್ಕಳನ್ನೂ ಪೋಷಿಸಿಕೊಳ್ಳಬೇಕು. ಗ್ರಾಮದಲ್ಲಿ ಎಲ್ಲಾ ಜನಾಂಗದವರು ಸೌರ್ಹಾದತೆಯಿಂದ ಬದುಕಬೇಕು. ಯಾರೊಂದಿಗೂ ದ್ವೇಶ ಕಟ್ಟಿಕೊಳ್ಳಬಾರದು. ತಾವೆಲ್ಲರೂ ಶ್ರೀ ಸಿದ್ದಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಿ, ದೈವೀ ಭಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮೊದಲಿಗೆ ಬಸವಲಿಂಗ ಅವಧೂತರು ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ಗದ್ದುಗೆ ದರ್ಶನ ಪಡೆದರು. ಶಶಿಧರ ಸೀತಾ ದಂಪತಿಗಳು ಅವಧೂತರ ಪಾದಪೂಜೆ ನೆರವೇರಿಸಿದರು.
ಪ್ರಮುಖರಾದ ನಾಗಯ್ಯ ಮಂಡಿ ಸ್ವಾಮಿ, ರಾಜಕುಮಾರ ಬೆಲ್ಲಾಳೆ, ಸಂತೋಷ ತರನಳ್ಳೆ, ವಿವೇಕಾನಂದ ತರನಳ್ಳೆ, ರಾಜಕುಮರ ಕನಕಟ್ಟೆ, ಸುಧಾಕರ ಪರ್ಮಾ, ಭರತ ಸಿದ್ದಾ ಕಲವಾಡಿ, ವಿಶ್ವನಾಥ ಪರ್ಮಾ, ಬಾಲಾಜಿ ಕಲವಾಡಿ, ವಿರಶೆಟ್ಟಿ ಖಂಡ್ರೆ, ಶಾಮರಾವ ಪರ್ಮಾ, ಮಲ್ಲಪ್ಪ ಹಚ್ಚೆ, ಅನೀಲ ಪರ್ಮಾ, ಬಸವರಾಜ ತರನಳ್ಳೆ, ಕಿರಣ ಪಾಂಚಾಳ, ಪ್ರಶಾಂತ ಖಂಡ್ರೆ, ವೀರಣ್ಣ ತರನಳ್ಳೆ, ಮತ್ತಿತರರು ಇದ್ದರು.