ಪವರ್ ಲಿಪ್ಟಿಂಗ್ ಸ್ಪರ್ಧೆ ಕಿರಣ್‌ಗೆ ಚಿನ್ನ

ಕೆ.ಆರ್. ಪುರ,ಏ.೧೯- ಡಬ್ಲ್ಯೂ ಪಿಸಿ ಪವರ್ ಲಿಪ್ಟಿಂಗ್ ಅಂತರರಾಷ್ಟ್ರೀಯ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕವನ್ನು ಪಡೆಯುವ ಮೂಲಕ ಕಿರಣ್ ಕುಮಾರ್ ರಾಷ್ಟ್ರೀಯ
ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಸರ್ಜಾಪುರ ಸಮೀಪ ಕರ್ನಾಟಕ ಪವಾರ್ ಲಿಪ್ಟಿಂಗ್ ಅಸೋಸಿಯೇಷನ್ ಮತ್ತು ವರ್ಲ್ಡ್ ಪವರ್ ಲಿಪ್ಟಿಂಗ್ ಕಾಂಗ್ರೆಸ್ ಇಂಡಿಯಾ ರವರು ಹಮ್ಮಿಕೊಂಡಿದ ರಾ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲ್ಲೂಕಿನ ಚಿನ್ನಪಲಿ ಗ್ರಾಮದ. ಪ್ರಕಾಶ್ ರೆಡ್ಡಿ ,ಮುನಿರತ್ನಮ್ಮ ,ರವರ ಪುತ್ರ ಕಿರಣ್ ಕುಮಾರ್ ಪಿ ೨೦೧೮ ರಲ್ಲಿ ವರ್ತೂರಿನ ಜಿಮ್ಮ ಒಂದರಲ್ಲಿ ತರಬೇತಿ ಪಡೆಯುತ್ತ ೨೦೧೮ ರಲ್ಲಿ ಅಂತರರಾಷ್ಟ್ರೀಯ ಮಟ್ಟದ ದೇಹಾದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಿಲರಾಗಿ ಅದೇ ವರ್ಷ ಡಿಸೆಂಬರ್ ನಲ್ಲಿ ಮಾರ್ಷಲ್ ಮೈನ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ಒಂದು ಬೆಳ್ಳಿ ಪದಕ ಮತ್ತು ಒಂದು ಕಂಚಿನ ಪದಕವನ್ನು ಪಡೆದಿದ್ದರು.
೨೦೧೯ ರಲ್ಲಿ ಏಷ್ಯಾ ಅಂತರರಾಷ್ಟ್ರೀಯ ದೇಹಾದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಒಂದು ರನ್ನರ್ ಅಪ್ ಮತ್ತು ಮೂರು ಕಂಚಿನ ಪದಕ ಗಳಿಸಿದರು.
೨೦೨೦ ರಲ್ಲಿ ಬೆಂಗಳೂರಿನ ನ್ಯೂ ಹ್ಯಾರಿಜನ್ ಕಾಲೆಜ್ ನಲ್ಲಿ ಬೆಂಗಳೂರು ನಾರ್ತ್ ಯುನಿವರ್ಸಿಟಿ ಏರ್ಪಡಿಸಿದ ನೈಸರ್ಗಿಕ ದೇಹಾದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಗಳಿಸಿದ್ದಾರೆ. ವಿಶೇಷವಾಗಿ ಅತಿಚಿಕ್ಕವಯಸ್ಸಿನಲ್ಲಿ ಮಿಸ್ಟರ್ ಚಾಂಪಿಯನ್ ಯಾಗಿದ್ದಾರೆ.